ಭೂಮಾಪಕರ ವಿರುದ್ಧ ಲೋಕಾಯುಕ್ತರಿಗೆ ದೂರು

ಶನಿವಾರ, ಮಾರ್ಚ್ 23, 2019
24 °C

ಭೂಮಾಪಕರ ವಿರುದ್ಧ ಲೋಕಾಯುಕ್ತರಿಗೆ ದೂರು

Published:
Updated:
Prajavani

ಹೆಸರಘಟ್ಟ: ಬಿಳಿಜಾಜಿ ಗ್ರಾಮದ ಸರ್ವೆ ನಂ 11/3ರಲ್ಲಿರುವ ಒಂದು ಎಕರೆ 16 ಗುಂಟೆ ಜಾಗವನ್ನು ನ್ಯಾಯಾಲಯದ ತೀರ್ಪಿನ ಪ್ರಕಾರ ದಾಖಲೆ ರೂಪಿಸಿ ಕೊಡದ ಕಾರಣಕ್ಕಾಗಿ ಯಲಹಂಕ ಉತ್ತರ ತಾಲ್ಲೂಕು ಭೂಮಾಪಕ ಅಧಿಕಾರಿ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ.

‘ಗ್ರಾಮದ ನಿವಾಸಿ ದೇವರಾಜ್ ದೂರು ಸಲ್ಲಿಸಿದವರು. ಈ ಭೂಮಿ ಚಿಕ್ಕ ಬಸಮ್ಮ ಅವರಿಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹದ್ದುಬಸ್ತು ಮಾಡಿ ಕೊಡಿ ಎಂದು ಹೇಳಿದರೂ ಅಧಿಕಾರಿಗಳು ತೀರ್ಪಿ ಪಾಲಿಸಿಲ್ಲ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. 

1975ರಲ್ಲಿ ಕಂಬದ ಹೊನ್ನಯ್ಯ ಅವರಿಂದ ಚಿಕ್ಕ ಬಸಮ್ಮ ಅವರು ಒಂದು ಎಕರೆ 16 ಗುಂಟೆ ಜಮೀನನ್ನು ಖರೀದಿಸಿದ್ದರು. ಚಿಕ್ಕಬಸಮ್ಮ ಅವರು ಖರೀದಿ ಮಾಡಿದ ಜಾಗವನ್ನು ಕಂಬದ ಹೊನ್ನಯ್ಯ ಅವರು ಮುನಿಮಾರಯ್ಯ ಎಂಬುವರಿಂದ ಖರೀದಿ ಮಾಡಿದ್ದರು.

ಆದರೆ, ಮುನಿಮಾರಯ್ಯ ಅವರ ಮೊಮ್ಮಕ್ಕಳು ಸರ್ವೆ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಾರೆ. ಆದರೆ ಅಧಿಕಾರಿಗಳು ಭೂಮಿಯ ಸರ್ವೇ ಮಾಡಿ ಗಡಿ ಗುರುತಿಸುವ ಬದಲು  ಮುನಿಮಾರಯ್ಯ ಸಂಬಂಧಿಕರು ಹೇಳಿದಂತೆ ಕೇಳುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಯಲಹಂಕ ಉತ್ತರ ತಾಲ್ಲೂಕು ಭೂಮಾಪನ ಅಧಿಕಾರಿ ಸತೀಶ್ ಅವರು ಪ್ರತಿಕ್ರಿಯಿಸಿ ‘ನಿಯಮಾನುಸಾರ ಜಾಗವನ್ನು ಅಳೆದು ಗಡಿಗುರುತಿಸಿ ಕೊಡಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !