ಕಾದಂಬರಿ ಲೋಕಕ್ಕೆ ಹೊಸ ದಿಕ್ಕು ತೋರಿಸಿದ ‘ಹಿಜಾಬ್‌’

7
ಡಾ.ಗುರುಪ್ರಸಾದ ಕಾಗಿನೆಲೆಗೆ ಡಾ.ಎಚ್‌.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ

ಕಾದಂಬರಿ ಲೋಕಕ್ಕೆ ಹೊಸ ದಿಕ್ಕು ತೋರಿಸಿದ ‘ಹಿಜಾಬ್‌’

Published:
Updated:
Deccan Herald

ಕುಂದಾಪುರ: ‘ಹಿಜಾಬ್’ ಕೃತಿ ಕನ್ನಡ ಕಾದಂಬರಿ ಲೋಕಕ್ಕೆ ಹೊಸ ದಿಕ್ಕನ್ನೇ ತೋರಿಸಿದೆ. ವಲಸೆಯ ವಿವಿಧ ಮಜಲುಗಳನ್ನು ಸಂವೇದನಾಶೀಲವಾಗಿ ಸಮನ್ವಯಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ ಎಂದು ಲೇಖಕ ಎಸ್. ದಿವಾಕರ್ ಅಭಿಪ್ರಾಯಪಟ್ಟರು.

ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಸೋಮವಾರ ನಡೆದ ಡಾ.ಎಚ್‌.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಈ ಬಾರಿಯ ಶಾಂತಾರಾಮ್ ಸಾಹಿತ್ಯ ಪುರಸ್ಕೃತ ಕೃತಿ ‘ಹಿಜಾಬ್’ ಕುರಿತು ಮಾತನಾಡಿದರು.
‘ಪ್ರಪಂಚದಾದ್ಯಂತ ಹರಡಿರುವ ವಲಸಿಗರು ಹೊಸದರಲ್ಲಿ ಅನುಭವಿಸುವ ತುಮುಲಗಳು ಹಾಗೂ ಸಮಸ್ಯೆಗಳು ಇಲ್ಲಿ ಬಿಂಬಿತವಾಗಿವೆ. ವಲಸೆ ಬಂದವನು ಅಲ್ಲಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ತನ್ನ ವೈಯಕ್ತಿಕ ಮತ್ತು ರಕ್ತ ಸಂಬಂಧಗಳ ನೆಲೆಗಳಿಗಾಗಿ ನಡೆಸುವ ಹುಡುಕಾಟ ಹಾಗೂ ಸಾಮಾಜಿಕವಾಗಿ ಹೊಂದಾಣಿಕೆಯ ಸಂದರ್ಭದಲ್ಲಿನ ವಲಸಿಗನ ಆತಂಕಗಳ ಕುರಿತ ಧ್ವನಿ ಇದೆ. ಇಲ್ಲಿ ಕೃತಿಕಾರ ತನ್ನ ಅನುಭವಗಳನ್ನು ದಾಖಲಿಸುತ್ತ ಹೋದಂತೆ ಕಾದಂಬರಿಯ ಒಳಗಿರುವ ವಿಶಾಲ ನೋಟಗಳು ಎಳೆ ಎಳೆಯಾಗಿ ಓದುಗರ ಮನಸ್ಸನ್ನು ಆವರಿಸಿಕೊಳ್ಳುತ್ತವೆ’ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ‘ಹಿಜಾಬ್‌’ ಕೃತಿಯ ಲೇಖಕ ಡಾ.ಗುರುಪ್ರಸಾದ ಕಾಗಿನೆಲೆ ಅವರು, ‘ನಾನು ಸಾಹಿತ್ಯವನ್ನು ಸ್ನೇಹಿತನಂತೆ ನೋಡುತ್ತೇನೆ. ಸಾಹಿತ್ಯವನ್ನು ಸೇವೆ ಎಂದುಕೊಳ್ಳುವುದಿಲ್ಲ. ಇಲ್ಲಿ ಕೊಡು–ಕೊಳ್ಳುವ ವ್ಯವಹಾರವಿಲ್ಲ. ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡು
ವುದರಿಂದ ಅದರಲ್ಲಿ ಒಂದು ರೀತಿಯ ತನ್ಮಯತೆ ಹಾಗೂ ಆಸಕ್ತಿ ಮೂಡಲು ಸಾಧ್ಯ’ ಎಂದರು.

ಮಣಿಪಾಲ ಅಕಾಡೆಮಿ ಅಫ್‌ ಜನರಲ್‌ ಎಜುಕೇಷನ್‌ ಆಡಳಿತಾಧಿಕಾರಿ ಡಾ.ಎಚ್‌.ಶಾಂತಾರಾಮ್, ಸಾಹಿತಿಗಳಾದ ವಸುಧೇಂದ್ರ, ಪ್ರಕಾಶ ಕಡಮೆ, ಸುನಂದಾ ಕಡಮೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !