ಬುಧವಾರ, ಜನವರಿ 29, 2020
30 °C

ಹಿರೇಕೆರೂರಿನಲ್ಲಿ ಕೌರವನಿಗೆ ಒಲಿದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರು: ಕುತೂಹಲ ಕೆರಳಿಸಿದ್ದ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ‍ಪಾಟೀಲ್‌ 29,067 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 

ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬನ್ನಿಕೋಡ ಅವರು 56,495 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಮತ ಎಣಿಕೆ ಆರಂಭದಿಂದಲೂ ಬಿ.ಸಿ.ಪಾಟೀಲ್‌ ಮುನ್ನಡೆ ಕಾಯ್ದುಕೊಂಡಿದ್ದರು. ಪ್ರತಿ ಸುತ್ತಿನಲ್ಲೂ 2 ರಿಂದ 3 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ವಿಶೇಷವಾಗಿತ್ತು. 

ಇದನ್ನೂ ಓದಿ: ಹಿರೇಕೆರೂರು ಅಖಾಡದಲ್ಲೊಂದು ಸುತ್ತು| ಆಗ ಸೆಣಸಾಟ ಈಗ ಜೋಡಿಯಾಟ

ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ 85,562 ಮತಗಳನ್ನು ಪಡೆದು 29 ಸಾವಿರ ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. 

ಪ್ರಜಾಕೀಯ ಪಕ್ಷದ ಅಭ್ಯರ್ಥಿ 597 ಮತಗಳನ್ನು ಪಡೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣೆ ಪ್ರಚಾರದ ಸಮಯದಲ್ಲಿ ಬಿ.ಸಿ.ಪಾಟೀಲ್‌ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳುತ್ತ ಬಂದಿದ್ದರು. 

 

ಹಿರೇಕೆರೂರು ಕ್ಷೇತ್ರದ ಫಲಿತಾಂಶ–2019
ಅಭ್ಯರ್ಥಿ ಪಕ್ಷ ಪಡೆದ ಮತಗಳು
 
ಬಿ.ಸಿ.ಪಾಟೀಲ ಬಿಜೆಪಿ 85,562
 
ಬಿ.ಎಚ್‌.ಬನ್ನಿಕೋಡ ಕಾಂಗ್ರೆಸ್‌ 56,495
 
ದೇವೇಂದ್ರಪ್ಪ ಉತ್ತಮ ಪ್ರಜಾಕೀಯ ಪಕ್ಷ 597
 
ಮಂಜುನಾಥ ಜಿ.ಎಸ್‌ ಕರ್ನಾಟಕ ರಾಷ್ಟ್ರ ಸಮಿತಿ 193
ಹರೀಶ ಎಸ್‌.ಇಂಗಳಗೊಂದಿ ಕರ್ನಾಟಕ ಜನತಾ ಪಕ್ಷ 182
ಉಜನಪ್ಪ ಜೆ.ಕೋಡಿಹಳ್ಳಿ ಪಕ್ಷೇತರ 275
 
ರಾಜಶೇಖರ ಕೆ.ದುದಿಹಳ್ಳಿ ಪಕ್ಷೇತರ 133
 
ರುದ್ರಯ್ಯ ಸಾಲಿಮಠ ಪಕ್ಷೇತರ 356
 
ಪೂಜಾರ ಕಲ್ಲಪ್ಪ ಪಕ್ಷೇತರ 472
 

 

ಹಿರೇಕೆರೂರು ಕ್ಷೇತ್ರದ ಮತದಾನದ ವಿವರ

ಒಟ್ಟು ಮತದಾರರು;1,83,481

ಮತ ಚಲಾಯಿಸಿದವರು;1,44,265

ನೋಟಾ;789

ತಿರಸ್ಕೃತ ಮತಗಳು;9
 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು