ಚನ್ನಗಿರಿ ಅತಂತ್ರ, ಬಿಜೆಪಿ ತೆಕ್ಕೆಗೆ ಹೊನ್ನಾಳಿ, ಜಗಳೂರು, ಹೊಸದುರ್ಗ

7

ಚನ್ನಗಿರಿ ಅತಂತ್ರ, ಬಿಜೆಪಿ ತೆಕ್ಕೆಗೆ ಹೊನ್ನಾಳಿ, ಜಗಳೂರು, ಹೊಸದುರ್ಗ

Published:
Updated:

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪುರಸಭೆ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಾನ ಸ್ಥಾನ ಪಡೆದುಕೊಂಡಿವೆ. ಮೂರು ಸ್ಥಾನ ಪಡೆದುಕೊಂಡಿರುವ ಜೆಡಿಎಸ್ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ.

ಒಟ್ಟು 23 ವಾರ್ಡ್‌ಗಳ ಪೈಕಿ ಬಿಜೆಪಿ 10, ಕಾಂಗ್ರೆಸ್‌ 10 ಹಾಗೂ ಜೆಡಿಎಸ್‌ 3 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಜೆಪಿಯ ಸಂಸದ, ಶಾಸಕರ ಮತವೂ ಸೇರಿದರೆ ಕಮಲ ಪಕ್ಷದ ಬಲ 12 ಆಗಲಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ - ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇರುವುದರಿಂದ ಈ ಎರಡು ಪಕ್ಷಗಳ ಸದಸ್ಯರನ್ನು ಸೇರಿಸಿದರೆ ಬಲ 13 ಆಗಲಿದೆ. ಅಧ್ಯಕ್ಷ ಸ್ಥಾನಕ್ಕೆ 13 ಮತಗಳು ಬೇಕಾಗಿದೆ. ಹೀಗಾಗಿ ಕಾಂಗ್ರೆಸ್‌ - ಜೆಡಿಎಸ್ ಮೈತ್ರಿಗೆ ಅಧಿಕಾರ ಹಿಡಿಯಲು ಹೆಚ್ಚು ಅವಕಾಶವಳಿವೆ.

ಕಳೆದ ಬಾರಿ ಚನ್ನಗಿರಿಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿತ್ತು.

ಹೊನ್ನಾಳಿ ಪ.ಪಂ. ಬಿಜೆಪಿಗೆ

ಹೊನ್ನಾಳಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಟ್ಟು 18 ವಾರ್ಡ್‌ಗಳ ಪೈಕಿ 10 ಬಿಜೆಪಿ, 5 ಕಾಂಗ್ರೆಸ್, 3 ಪಕ್ಷೇತರರ ಪಾಲಾಗಿದೆ. ಸಂಸದ, ಶಾಸಕರ ಮತ ಸೇರಿದರೆ ಬಿಜೆಪಿಯ ಸಂಖ್ಯಾ ಬಲ 20 ಆಗಲಿದೆ.  ಕಳೆದ ಬಾರಿ ಒಟ್ಟು 15 ವಾರ್ಡ್‌ಗಳ ಪೈಕಿ 10 ಬಿಜೆಪಿ, 5 ಕಾಂಗ್ರೆಸ್‌ ಹಾಗೂ ಒಂದನ್ನು ಪಕ್ಷೇತರ ಗೆದ್ದುಕೊಂಡಿದ್ದರು.

ಜಗಳೂರು ಪ.ಪಂ. ಬಿಜೆಪಿ ತೆಕ್ಕೆಗೆ

ಒಟ್ಟು 18 ವಾರ್ಡ್‌ಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 5 ಹಾಗೂ ಜೆಡಿಎಸ್‌ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಅವಧಿಯಲ್ಲಿ ಒಟ್ಟು 15 ವಾರ್ಡ್‌ಗಳಲ್ಲಿ 12ರಲ್ಲಿ ಕಾಂಗ್ರೆಸ್‌, 2ರಲ್ಲಿ ಜೆಡಿಎಸ್ ಹಾಗೂ ಒಂದರಲ್ಲಿ ಬಿಜೆಪಿ ಗೆಲುವು ಪಡೆದಿತ್ತು.

ಹೊಸದುರ್ಗದಲ್ಲಿ ಬಿಜೆಪಿಗೆ ಬಹುಮತ

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ಪುರಸಭೆಯಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಒಟ್ಟು 23 ವಾರ್ಡ್‌ಗಳ ಪೈಕಿ ಬಿಜೆಪಿ ಅಭ್ಯರ್ಥಿಗಳು 13 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. ಈವರೆಗೆ ಹೊಸದುರ್ಗ ಪುರಸಭೆಯಲ್ಲಿ ಕಾಂಗ್ರೆಸ್‌ ಆಡಳಿತ ನಡೆಸುತ್ತಿತ್ತು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !