ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಬೆಳಗಾವಿ ಕೆಎಸ್‌ಸಿಎ ಮೈದಾನದಲ್ಲಿ ಭಾರತ –ಶ್ರೀಲಂಕಾ ‘ಎ’ ತಂಡಗಳ ಟೆಸ್ಟ್‌ 25ರಿಂದ

Published:
Updated:

ಬೆಳಗಾವಿ: ಇಲ್ಲಿನ ಆಟೊನಗರದ ಕೆಎಸ್‌ಸಿಎ ಮೈದಾನದಲ್ಲಿ ಮೇ 25ರಿಂದ ಜೂನ್‌ 10ರವರೆಗೆ ಭಾರತ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳು ನಡೆಯಲಿವೆ.

‘ಶ್ರೀಲಂಕಾ ಪ್ರವಾಸದ 2 ಟೆಸ್ಟ್‌ಗಳ ಪೈಕಿ ಮೊದಲನೇ ‍ಪಂದ್ಯ ಮೇ 25ರಿಂದ 28ವರೆಗೆ ಇಲ್ಲಿ ಹಾಗೂ 2ನೇ ಪಂದ್ಯ ಮೇ 31ರಿಂದ ಜೂನ್‌ 3ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ನಂತರ 5 ದಿನಗಳ ಏಕದಿನ ಸರಣಿಯ ಪಂದ್ಯಗಳು ಜೂನ್‌ 6, 8, 10ರಂದು ಇಲ್ಲಿ ಮತ್ತು ಜೂನ್‌ 13, 15ರಂದು ಹುಬ್ಬಳ್ಳಿಯಲ್ಲಿ ನಿಗದಿಯಾಗಿವೆ’ ಎಂದು ಮೈದಾನ ವ್ಯವಸ್ಥಾಪಕ ದೀಪಕ್‌ ಪವಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈದಾನ ಹಾಗೂ ವ್ಯವಸ್ಥೆ ಪರಿಶೀಲನೆಗಾಗಿ ಬಿಸಿಸಿಐ ಅಧಿಕಾರಿಗಳ ತಂಡ ಸೋಮವಾರ (ಮೇ 13) ಭೇಟಿ ನೀಡಲಿದೆ’ ಎಂದು ಮಾಹಿತಿ ನೀಡಿದರು.

ಇಲ್ಲಿ 2017ರ ಡಿಸೆಂಬರ್‌ನಲ್ಲಿ ಭಾರತ ಮಹಿಳಾ ‘ಎ’ ತಂಡ ಹಾಗೂ ಬಾಂಗ್ಲಾದೇಶ ಮಹಿಳಾ ‘ಎ’ ತಂಡಗಳ ನಡುವೆ 3 ಪಂದ್ಯಗಳ ಟ್ವೆಂಟಿ-20 ಸರಣಿ ನಡೆದಿತ್ತು. ಹೋದ ವರ್ಷ ಆಗಸ್ಟ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ‘ಎ’ ತಂಡಗಳ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಮಳೆ ಕಾರಣದಿಂದಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಈಗ ನಡೆಯಲಿರುವುದು ಇಲ್ಲಿನ 2ನೇ ಅಂತರರಾಷ್ಟ್ರೀಯ ಪಂದ್ಯವಾಗಿದೆ.

Post Comments (+)