ಶನಿವಾರ, ಡಿಸೆಂಬರ್ 14, 2019
24 °C

ರಮೇಶ್‌ ಕುಮಾರ್ ಪ್ರತಿಕ್ರಿಯೆ | ಅನರ್ಹ ಅನ್ನಿಸಿಕೊಳ್ಳೋದು ಗೌರವ ಅಲ್ಲ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸುಪ್ರೀಂಕೋರ್ಟ್‌ ತೀರ್ಪನ್ನು ನಾನು ಗೌರವಿಸ್ತೀನಿ. ಪ್ರಕರಣವನ್ನು ನ್ಯಾಯಮೂರ್ತಿಗಳು ಹೇಗೆ? ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ ಎನ್ನುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ ಎಂದು 17 ಶಾಸಕರನ್ನು ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಶಾಸಕರು ಸಲ್ಲಿಸಿದ್ದ ರಾಜೀನಾಮೆಯನ್ನು ಒಪ್ಪಿಕೊಳ್ಳದೆ ಅನರ್ಹಗೊಳಿಸಿದ್ದ ರಮೇಶ್‌ ಕುಮಾರ್‌, ‘ರಾಜೀನಾಮೆ ಒಂದು ಗೌರವಯುತವಾದ ಪ್ರಕ್ರಿಯೆ, ಅನರ್ಹತೆ ಒಂದು ಶಿಕ್ಷೆ. ರಾಜೀನಾಮೆ ಮತ್ತು ಅನರ್ಹತೆಯನ್ನು ಒಂದೇ ದೃಷ್ಟಿಕೋನದಿಂದ ನೋಡಲು ಆಗಲ್ಲ. ಅನರ್ಹಗೊಳಿಸಿದ್ದು ಸರಿಯಿದೆ ಎಂದೇ ಸುಪ್ರೀಂಕೋರ್ಟ್‌ ಸಹ ಹೇಳಿದೆ’ ಎಂದರು.

ಇದನ್ನೂ ಓದಿ: ಸುಪ್ರೀಂಕೋರ್ಟ್‌ ತೀರ್ಪು: ಅನರ್ಹಗೊಳಿಸಿದ್ದು ಸರಿ, ಅವಧಿ ನಿರ್ಧರಿಸಿದ್ದು ತಪ್ಪು

ಪಕ್ಷಾಂತರ ನಿಷೇಧ ಕಾಯ್ದೆಗೆ ಆಧಾರವಾಗಿರುವ ಸಂವಿಧಾನದ 10ನೇ ಪರಿಚ್ಛೇದದಲ್ಲಿ ‘ಸದನದ ಉಳಿದ ಅವಧಿಗೆ’ ಎನ್ನುವ ಪದಗಳ ಉಲ್ಲೇಖವಿದೆ. ಈ ದೃಷ್ಟಿಯಿಂದ ನೋಡಿದರೆ ಕರ್ನಾಟಕ ವಿಧಾನಸಭೆಯ ಅವಧಿ 2023ರವರೆಗೆ ಇದೆ. ಈ ಹಿನ್ನೆಲೆಯಲ್ಲಿ ನಾನು ಅನರ್ಹತೆಯ ತೀರ್ಮಾನ ತೆಗೆದುಕೊಂಡಿದ್ದೆ ಎಂದರು.

ಪ್ರಕರಣದಲ್ಲಿ ನಾನು ಅರ್ಜಿದಾರನೂ ಅಲ್ಲ, ಪ್ರತಿವಾದಿಯೂ ಅಲ್ಲ. ಮೇಲ್ಮನವಿ ನಾನು ಸಲ್ಲಿಸುವುದಿಲ್ಲ. ಕಾಂಗ್ರೆಸ್‌ ಪಕ್ಷ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ನುಡಿದರು.

ಇದನ್ನೂ ಓದಿ: ಸ್ಪೀಕರ್‌ ಆದೇಶ ಎತ್ತಿ ಹಿಡಿದ ಸುಪ್ರೀಂ: ಅನರ್ಹರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ Live

‘ತೀರ್ಪಿನಿಂದ ನಾನು ಭಾಗಶಃ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೇನೆ. ಅನರ್ಹ ಅಂತ ಅನ್ನಿಸಿಕೊಳ್ಳೋದು ಗೌರವದ ಸಂಕೇತ ಅಲ್ಲ. ಅವರಿಗೆ ಪುನಃ ಜನರ ಮುಂದೆ ನಿಲ್ಲಿಸಿಕೊಳ್ಳಲು ಅವಕಾಶ ಕೊಡಬಾರದಿತ್ತು. ಈಚೆಗೆ ನಡೆದ ಬಹುತೇಕ ಚುನಾವಣೆಗಳಲ್ಲಿ ಪಕ್ಷಾಂತರಿಗಳನ್ನು ಜನರು ತಿರಸ್ಕರಿಸಿದ್ದಾರೆ. ಇವರ ವಿಚಾರ ಏನಾಗುತ್ತೋ ನೋಡೋಣ’ ಎಂದು ರಮೇಶ್‌ಕುಮಾರ್‌ ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು