ಅಥಣಿ: ಅಥಣಿ ಮತ ಕ್ಷೇತ್ರ ವ್ಯಾಪ್ತಿಯ ಜನವಾಡ ಗ್ರಾಮಸ್ಥರು ಉಪಚುನಾವಣೆ ಬಹಿಷ್ಕರಿಸುವುದಾಗಿ ಭಾನುವಾರ ತಿಳಿಸಿದರು.

‘ಗ್ರಾಮದಲ್ಲಿ ಆಗಸ್ಟ್‌ನಲ್ಲಿ ಕೃಷ್ಣಾ ನದಿಯ ಪ್ರವಾಹ ಬಂದಿತ್ತು. ಜನರು ಕಷ್ಟ–ನಷ್ಟ ಅನುಭವಿಸಿದರೂ ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸಿಲ್ಲ. ಸಂತ್ರಸ್ತರಿಗೆ ನ್ಯಾಯಸಮ್ಮತವಾಗಿ ಕೊಡಬೇಕಾದ ಪರಿಹಾರವೂ ಸಿಕ್ಕಿಲ್ಲ. ಬಸ್ ಸೇವೆ ಮೊದಲಾದ ಮೂಲಸೌಲಭ್ಯವಿಲ್ಲ. ಪ್ರವಾಹದಿಂದ ಹಾಳಾದ ರಸ್ತೆಗಳು ದುರಸ್ತಿಯಾಗಿಲ್ಲ. ಇವೆಲ್ಲದರಿಂದ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಹೀಗಾಗಿ, ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ಬಿಲಾಲ ಪಾಟೀಲ, ಮಹ್ಮದ ಕಮಾಲನವರ, ಪರಸಪ್ಪ ಯಲಶೆಟ್ಟಿ, ಗುರುಬಸು ಕಾಂಬಳೆ, ಶಿವಾನಂದ ಯಲಶೆಟ್ಟಿ, ಸತ್ಯಪ್ಪ ಜಾಮಗೌಡ, ಬಸಪ್ಪ ಮರೆಗುದ್ದಿ, ಬಸಪ್ಪ ಯಲಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.