ಗುರುವಾರ , ಏಪ್ರಿಲ್ 9, 2020
19 °C

ಹಳ್ಳಿಯವರು ಎರಡನೇ ದರ್ಜೆ ನಾಗರಿಕರಂತೆ ಬದುಕುವ ದುಃಸ್ಥಿತಿ ಇದೆ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಳ್ಳಿಯ ಜನ ಎರಡನೇ ದರ್ಜೆ ಪ್ರಜೆಗಳಂತೆ ಬದುಕುವ ದುಃಸ್ಥಿತಿ ದೇಶದಲ್ಲಿದೆ. ಗಾಂಧೀಜಿ ಕನಸು ಕಂಡಗ್ರಾಮ ಸ್ವರಾಜ್‌ ಏನಾಯ್ತು? ಎಷ್ಟು ಹಳ್ಳಿಗಳು ಒಳ್ಳೆಯದಾಗಿವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನವಿಡೀ ಶ್ರಮಪಟ್ಟು ದುಡಿಯುವವನು ದಿನದ ಕೊನೆಯಲ್ಲಿ ₹144 ಕೂಲಿ ಪಡೆದರೆ, ಐದು ನಿಮಿಷಗಳಲ್ಲಿ ಕೈಚಳಕದ ಕೆಲಸ ಮಾಡಿ ₹50 ಸಾವಿರ ಗಳಿಸುವವರೂ ಇದ್ದಾರೆ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಸೇರಿದಂತೆ ಎಲ್ಲ ಕಡೆಯಲ್ಲೂ ಹಣಕ್ಕಾಗಿ ದುರಾಸೆ ಮೇರೆ ಮೀರಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು