ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ: ಡಿ.31ರವರೆಗೆ ಚಾಲನೆಯಲ್ಲಿಡಲು ಅನುಮತಿ

Last Updated 15 ನವೆಂಬರ್ 2018, 17:13 IST
ಅಕ್ಷರ ಗಾತ್ರ

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಡಿ.31ರವರೆಗೆ ಚಾಲನೆಯಲ್ಲಿ ಇಡಲುಭಾರತೀಯ ಪರಮಾಣು ಪ್ರಾಧಿಕಾರ ಅನುಮತಿ ನೀಡಿದೆ.

ಎಲ್ಲವೂ ಸುಗಮವಾಗಿ ಸಾಗಿದರೆ, ಅತಿ ಹೆಚ್ಚು ದಿನ ನಿರಂತರ ವಿದ್ಯುತ್ ಉತ್ಪಾದಿಸಿದ ವಿಶ್ವದ ಮೊದಲ ಘಟಕ ಎಂಬ ದಾಖಲೆಗೆ ಪಾತ್ರವಾಗಲಿದೆ. ಇದು ಎಲ್ಲ ಮಾದರಿಗಳ ರಿಯಾಕ್ಟರ್‌ಗಳಲ್ಲೂ ಆಗಲಿದೆ ಎಂಬುದು ಗಮನಾರ್ಹ.

ಭಾರ ಜಲ ರಿಯಾಕ್ಟರ್ ವಿಭಾಗದಲ್ಲಿ ನಿರಂತರ ವಿದ್ಯುತ್ ಉತ್ಪಾದಿಸುತ್ತಿರುವ ವಿಶ್ವದ ಮೊದಲ ಘಟಕ ಎಂಬ ಹೆಗ್ಗಳಿಕೆಗೆ ಅ.24ರಂದು (894 ದಿನ) ಪಾತ್ರವಾಗಿತ್ತು.ಅದೇ ದಿನ ಎಲ್ಲ ಮಾದರಿಗಳ ರಿಯಾಕ್ಟರ್‌ಗಳ ಪೈಕಿಎರಡನೇ ಸ್ಥಾನಕ್ಕೇರಿತ್ತು.

‘ಗುರುವಾರಕ್ಕೆ ಈ ಘಟಕವು 916 ದಿನಗಳನ್ನು ಪೂರೈಸಿದ್ದು, ಡಿ.10ರಂದು ಇದರ ಕಾರ್ಯಾಚರಣೆಯ 941ನೇ ದಿನವಾಗಲಿದೆ. ನಿರೀಕ್ಷೆ ಪ್ರಕಾರ ನಡೆದರೆ ಅಂದು ವಿಶ್ವದಾಖಲೆ ಬರೆಯಲಿದ್ದೇವೆ' ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT