ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆ ಹಾಡುವ ನೈತಿಕತೆ ಇದೆಯಾ..?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಪ್ರಶ್ನೆ
Last Updated 9 ಜೂನ್ 2019, 17:50 IST
ಅಕ್ಷರ ಗಾತ್ರ

ಮೈಸೂರು: ‘ಕುವೆಂಪು ಆಶಯಕ್ಕೆ ವಿರುದ್ಧವಾಗಿ ಪ್ರಾಥಮಿಕ ಶಿಕ್ಷಣ ನೀಡಲು ಮುಂದಾದವರಿಗೆ, ರಸ
ಋಷಿ ರಚಿತ ನಾಡಗೀತೆ ಹಾಡುವ ನೈತಿಕತೆ ಇದೆಯಾ? ಸರ್ಕಾರದ ಭಾಗವಾಗಿಯೂ ನಾನು ಈ ಮಾತು ಹೇಳುತ್ತಿರುವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ರಾಜ್ಯ ಸರ್ಕಾರವೇ ಆರಂಭಿಸಿದ್ದು, ನೆಲದ ಭಾಷೆಗೆ ವಿರುದ್ಧವಾದ ನಡೆ. ಕನ್ನಡ ಕೊಲ್ಲುವ ಕೆಲಸ ನಡೆದಿದೆ’ ಎಂದು ಭಾನುವಾರ ಇಲ್ಲಿ ನಡೆದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರ್ಕಾರದ ನಡೆಯನ್ನು ಟೀಕಿಸಿದರು.

‘ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ರೂಪಿಸಿದ ದಾರಿ ಸರಿಯಿಲ್ಲ. ಈ ಹಿಂದಿನ ಸರ್ಕಾರ ರಚಿಸಿದ್ದ ಸಮಿತಿಯ 21 ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರಗಳು ಆಯಾ ರಾಜ್ಯ ಭಾಷೆಯ ರಕ್ಷಣಾ ಗೋಡೆಗಳಾಗಿದ್ದವು. ಆದರೆ, ಈಚೆಗೆ ಹಿಂದಿಯೇತರ ರಾಜ್ಯಗಳ ರಾಜ್ಯ ಭಾಷೆ ಕಳೆದು ಹೋಗುತ್ತಿವೆ. ಇದರಲ್ಲಿ ಕನ್ನಡವೂ ಸೇರಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT