ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live | ಸ್ಪೀಕರ್ ಸುದ್ದಿಗೋಷ್ಠಿ: ಆರ್.ಶಂಕರ್, ಜಾರಕಿಹೊಳಿ, ಕುಮಠಳ್ಳಿ ಅನರ್ಹ

Last Updated 25 ಜುಲೈ 2019, 15:17 IST
ಅಕ್ಷರ ಗಾತ್ರ

ಬೆಂಗಳೂರು:ವಿಧಾನಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿಯ ಕ್ಷಣ ಕ್ಷಣದ ಮಾಹಿತಿ

08:45 –‘ಆತ್ಮಸಾಕ್ಷಿಗೆ ದ್ರೋಹವೆಸಗದೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ’,ಸ್ಪೀಕರ್ ಆಗಿ ಮುಂದುವರಿಯಲಿದ್ದೀರಾ ಎಂಬ ಪ್ರಶ್ನೆಗೆ ರಮೇಶ್ ಕುಮಾರ್ ಉತ್ತರ

08:40 –ರಾಜೀನಾಮೆ ಸಹಜವಾಗಿರಲಿಲ್ಲ. ಹಾಗಾಗಿ ರಾಜೀನಾಮೆಯನ್ನುತಿರಸ್ಕರಿಸಿದ್ದೇನೆ. ಎರಡನೆಯದ್ದಾಗಿ ಅನರ್ಹತೆ ಪ್ರಕರಣ ಕೈಗೆತ್ತಿಕೊಂಡು ನಿರ್ಧಾರ ಕೈಗೊಂಡಿದ್ದೇನೆ: ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ

08:35 –ಸುಪ್ರೀಂ ಕೋರ್ಟ್‌ ನನ್ನ ಮೇಲೆ ಭರವಸೆಯಿಟ್ಟಿದೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದೇನೆ

08:30 –ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ ಕೂಡ ಪ್ರಸಕ್ತ ವಿಧಾನಸಭೆ ಅವಧಿ ಪೂರ್ಣಗೊಳ್ಳುವವರೆಗೆಅನರ್ಹ: ಸ್ಪೀಕರ್ ಆದೇಶ

08:27 –ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ತೀರ್ಪು ನೀಡಲು ಅಧಿಕಾರವಿರುತ್ತದೆಯೇ ವಿನಃ ನ್ಯಾಯ ದೊರಕಿಸಲು ಅವಕಾಶವಿರುವುದಿಲ್ಲ. ಈ ಕುರಿತು ಬೇಸರವಿದೆ. ನಿಯಮದಂತೆ ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸಿದ್ದೆ

08:25 –ಒಂದು ಬಾರಿ ಮತದಾರ ನಿಮ್ಮನ್ನು ಆಯ್ಕೆ ಮಾಡಿದ ಮೇಲೆ ನೀವು ಮನಸಿಗೆ ಬಂದ ನಿರ್ಣಯ ಕೈಗೊಂಡರೆ ಮತದಾರನಿಗೆ ನಿಮ್ಮನ್ನು ಪ್ರಶ್ನಿಸುವ ಹಕ್ಕಿಲ್ಲವೇ? ಡಾ. ಉಮೇಶ್ ಜಾಧವ್ ರಾಜೀನಾಮೆ ವೇಳೆ ಮತದಾರರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು.

08:18 –ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ ವಿಚಾರದಲ್ಲಿ ರಾಜೀನಾಮೆ ಪತ್ರ ನಂತರ ಸಲ್ಲಿಕೆಯಾಗಿದೆ. ಅದಕ್ಕೂ ಮೊದಲು ಅನರ್ಹತೆ ದೂರು ದಾಖಲಾಗಿದೆ.

08:15 –ಸುಪ್ರೀಂ ಕೋರ್ಟ್‌ ಮತ್ತು ಸ್ಪೀಕರ್ ದಾಯಾದಿಗಳಲ್ಲ. ಸುಪ್ರೀಂ ಕೋರ್ಟ್‌ ಸೂಚನೆಯ ಬಳಿಕ ಎರಡನೇ ಬಾರಿಗೆ ರಾಜೀನಾಮೆ ಸಲ್ಲಿಸಲು ವಿಶೇಷ ವಿಮಾನದಲ್ಲಿ ಬಂದಿದ್ದಾರೆ. ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿ ವಿಶೇಷ ವಿಮಾನದ ಮೂಲಕ ತೆರಳಿದ್ದಾರೆ.

08:11 –ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ ಜುಲೈ6ರಂದು ರಾಜೀನಾಮೆ ಸಲ್ಲಿಸಲು ಬರುವ ಬಗ್ಗೆ ಸಮಯ ಕೇಳಿಲ್ಲ. ನಾನು ಕಚೇರಿ ಬಿಟ್ಟು ತೆರಳಿದ ಮೇಲೆ ಬಂದಿದ್ದಾರೆ. ಆದರೂ ಪತ್ರವನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡಲು ಕಾರ್ಯದರ್ಶಿಗೆ ಸೂಚಿಸಿದ್ದೆ. 9ರಂದು ರಾಜೀನಾಮೆ ಪತ್ರಗಳನ್ನು ಪಡೆದಾಗ ಅದು ನಿಯಮದಂತೆ ಇರಲಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗಲು ತಿಳಿಸಿದ್ದೆ. ಕ್ರಮಬದ್ಧವಾಗಿ ಸಲ್ಲಿಸಲು ತಿಳಿಸಿದ್ದೆ. ಈ ಮಧ್ಯೆ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

08:06 –ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ, ಉಮೇಶ್ ಜಾಧವ್ ವಿರುದ್ಧವೂ ಅನರ್ಹತೆ ದೂರು ದಾಖಲಾಗಿತ್ತು. ಆದರೆ ಜಾಧವ್ ಅವರನ್ನು ದೂರಿನಿಂದ ಕೈಬಿಡಲಾಗಿತ್ತು. ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ ವಿರುದ್ಧ ಸಿದ್ದರಾಮಯ್ಯ ದೂರು ನೀಡಿದ್ದರು.

08:04 –ರಾಣೆಬೆನ್ನೂರಿನಕೆಪಿಜೆಪಿ ಶಾಸಕ ಶಂಕರ್ ಅನರ್ಹಗೊಳಿಸಿ ಸ್ಪೀಕರ್ ಆದೇಶ. 3 ವರ್ಷ 10 ತಿಂಗಳ ಕಾಲ ಅನರ್ಹ

08:02 –15 ಶಾಸಕರ ವಿರುದ್ಧ ಅನರ್ಹತೆ ದೂರು ಬಂದಿದೆ. 17 ಶಾಸಕರ ಮೇಲೆ ಬೇರೆಬೇರೆ ಪ್ರಕರಣಗಳಿವೆ

08:00 – ಹೀಗಾಗಿ 23ಕ್ಕೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಿದ್ದೆ

07:59 – ಜುಲೈ 8ರಂದು ಶಂಕರ್ ಮತ್ತು ಪಕ್ಷೇತರ ಶಾಸಕ ನಾಗೇಶ್ ಅವರು ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ನೀಡಿದ್ದಾರೆ. ಈ ಕುರಿತು ರಾಜ್ಯಪಾಲರಿಂದ ಮಾಹಿತಿ ದೊರೆಯಿತು. ಅದೇ ದಿನ ಶಂಕರ್ ರಾಜ್ಯಪಾಲರಿಗೆ ಪತ್ರ ಬರೆದು ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಅದನ್ನೂ ರಾಜ್ಯಪಾಲರು ನನಗೆ ಪತ್ರದ ಮೂಲಕ ತಿಳಿಸಿದ್ದಾರೆ.

07:55 – ರಾಣೆಬೆನ್ನೂರಿನಕೆಪಿಜೆಪಿ ಶಾಸಕ ಶಂಕರ್ ಅವರು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದೇನೆ ಎಂದು ಪತ್ರ ಬರೆದಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನವರೂ ಈ ಕುರಿತು ಮಾಹಿತಿ ನೀಡಿದ್ದಾರೆ.ಹೀಗಾಗಿ ಅವರಿಗೆ ಕಾಂಗ್ರೆಸ್‌ ಶಾಸಕರ ಜತೆ ಆಸನದ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT