ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗು ಸಹಿತ ಉತ್ತಮ ಮಳೆ

ಶಿವಮೊಗ್ಗ: ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬ
Last Updated 23 ಏಪ್ರಿಲ್ 2019, 20:08 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಮಂಗಳವಾರ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಸಾಗರದಲ್ಲಿಮಳೆ, ಗಾಳಿಗೆಪ್ರಗತಿ ನಗರದಲ್ಲಿ ಮರ ಬುಡಮೇಲಾಗಿದ್ದು, ರಸ್ತೆಯ ಮೇಲೆ ಬಿದ್ದಿದೆ.

ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಗಾಳಿ ಸಹಿತ ಮಳೆಗೆ ಮರ, ವಿದ್ಯುತ್‌ ಕಂಬ ಬಿದ್ದಿದ್ದು, ತೆರವುಗೊಳಿಸಲಾಯಿತು. ಸಿಗಂದೂರು–ಹೊಳೆಬಾಗಿಲು ಮಧ್ಯೆ ಜೋರು ಮಳೆ, ಗಾಳಿಗೆ ಮರ ಬಿದ್ದುರಸ್ತೆ ವಿಭಜಕಕೊಂಚ ಮುರಿದಿದ್ದು,ಒಂದು ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಸಿಗರು ಮರ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಉಳ್ಳೂರಿನಲ್ಲಿ ಸಾಧಾರಣ ಮಳೆಯಾಗಿದೆ.

ತೀರ್ಥಹಳ್ಳಿಯಲ್ಲಿ ಗುಡುಗು ಸಹಿತ ಮಳೆ, ಗಾಳಿಗೆ ಮರ ಬಿದ್ದು, ತೀರ್ಥಹಳ್ಳಿ–ಶಿವಮೊಗ್ಗ ರಸ್ತೆ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು. ನಂತರ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸೊರಬ, ಭದ್ರಾವತಿಯಲ್ಲಿ ಉತ್ತಮ ಮಳೆಯಾಗಿದ್ದು, ಭದ್ರಾವತಿಯ ಕೆಲವೆಡೆ ಗಾಳಿಗೆ ವಿದ್ಯುತ್ ಕಂಬಗಳು ಧರೆ
ಗುರುಳಿವೆ. ಶಿಕಾರಿಪುರದಲ್ಲಿ ತುಂತುರು ಮಳೆಯಾಗಿದೆ. ಶಿವಮೊಗ್ಗದ ಸುತ್ತಮುತ್ತ ಸಾಧಾರಣ ಮಳೆಯಾಗಿದ್ದು, ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು.

ಮಳೆ; ಚಾವಣಿ ಕುಸಿದು ಮಹಿಳೆ ಸಾವು

ಹುಣಸೂರುತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಚಾವಣಿ ಕುಸಿದು ದೊಡ್ಡತಾಯಮ್ಮ (73) ಎಂಬುವವರುಮೃತಪಟ್ಟಿದ್ದಾರೆ.

ಬಿರುಗಾಳಿಗೆ ಸಿಲುಕಿದ ಇವರ ಮನೆಯ ಶೀಟು ಹಾರಿ ಹೋಗಿದೆ. ಈ ವೇಳೆ ಮನೆಯಲ್ಲಿ ದೊಡ್ಡತಾಯಮ್ಮ ಮಲಗಿದ್ದರು. ಇವರ ಮೇಲೆ ಶೀಟಿನ ತುಂಡು ಬಿದ್ದಿದೆ. ತಾಲ್ಲೂಕಿನಾದ್ಯಂತ ಬೀಸಿದ ಭಾರಿ ಗಾಳಿಗೆ ಹಲವು ಮರಗಳು ಧರೆಗುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT