ಗುರುವಾರ , ಜೂನ್ 17, 2021
24 °C
ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ವಿಜೇತೆ

ಕಂಚು ವಿಜೇತೆ ಮಲಪ್ರಭಾ ಜಾಧವ ಅವರನ್ನು ದತ್ತು ಪಡೆದ ಕೆಎಲ್‌ಇ ಸಂಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ಏಷ್ಯನ್‌ ಕ್ರೀಡಾಕೂಟದಲ್ಲಿ ಕುರಾಶ್‌ ಆಟದಲ್ಲಿ ಕಂಚಿನ ಪದಕ ಗೆದ್ದ ಜಿಲ್ಲೆಯ ತುರಮರಿ ಗ್ರಾಮದ ಮಲಪ್ರಭಾ ಜಾಧವ ಅವರನ್ನು ಕೆಎಲ್‌ಇ ಸಂಸ್ಥೆ ದತ್ತು ತೆಗೆದುಕೊಂಡಿದೆ. ಅವರ ವಿದ್ಯಾಭ್ಯಾಸ ಹಾಗೂ ಕ್ರೀಡೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಸಂಸ್ಥೆ ಭರಿಸಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲಲು ಬೇಕಾದಂತಹ ತರಬೇತಿಯನ್ನು ಕೊಡಿಸಲಾಗುವುದು. ಅವಶ್ಯಕತೆ ಇದ್ದರೆ ವಿದೇಶಿ ತರಬೇತುದಾರರನ್ನು ಕೂಡ ನೇಮಿಸಲಾಗುವುದು ಎಂದರು.

‘ಮಲಪ್ರಭಾ ಅವರ ತಂದೆ ಕೃಷಿಕರಾಗಿದ್ದಾರೆ. ಕೇವಲ 2 ಎಕರೆ ಜಮೀನು ಇದೆ. ಕುಟುಂಬದಲ್ಲಿ ಕಡುಬಡತನವಿದೆ. ಅವರಿಗೆ ಅಗತ್ಯ ಇರುವ ಎಲ್ಲ ಅವಶ್ಯಕತೆಗಳನ್ನು ನಾವು ಪೂರೈಸಲಿದ್ದೇವೆ. ಶಿಕ್ಷಣದ ವೆಚ್ಚ, ವಸತಿ, ಊಟೋಪಚಾರ, ಕ್ರೀಡಾ ತರಬೇತಿ ಸೇರಿದಂತೆ ಎಲ್ಲ ರೀತಿಯ ಸಹಾಯವನ್ನು ನಾವು ಮಾಡಲಿದ್ದೇವೆ’ ಎಂದು ತಿಳಿಸಿದರು.

‘ಮಲಪ್ರಭಾ ಈಗ ಲಿಂಗರಾಜ ಕಾಲೇಜಿನಲ್ಲಿ ಪಿಯುಸಿಗೆ ಪ್ರವೇಶ ಪಡೆದಿದ್ದಾರೆ. ಕ್ರೀಡಾ ತರಬೇತಿಯ ಬಿಡುವಿನ ಅವಧಿಯಲ್ಲಿ ಅವರಿಗೆ ಪಠ್ಯಕ್ರಮದ ಪಾಠಗಳನ್ನು ಹೇಳಿಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಮಲಪ್ರಭಾ ಜಾಧವ, ತರಬೇತುದಾರರಾದ ತ್ರಿವೇಣಿ ಸಿಂಗ್‌ ಹಾಗೂ ಜಿತೇಂದ್ರ ಸಿಂಗ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು