ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ವಿರುದ್ಧ ಧಿಕ್ಕಾರ ಹಾಕಿದರೆ ನಾಲ್ಗೆ ಸೀಳ್ತಿನಿ: ಕೆ.ಎನ್ ರಾಜಣ್ಣ

Last Updated 27 ಮೇ 2019, 11:17 IST
ಅಕ್ಷರ ಗಾತ್ರ

ತುಮಕೂರು: ಬೆಳಿಗ್ಗೆ ಯಾರೊ ಮಾಹಿತಿ ಕೊಟ್ಟರು ಕಾಂಗ್ರೆಸ್ ಕಚೇರಿಯಲ್ಲಿ, ಟೌನ್ ಹಾಲ್ ಹತ್ತಿರ ನಿಮ್ಮ ವಿರುದ್ಧ ಧಿಕ್ಕಾರಕೂಗಿದ್ರು ಅಂಥ. ನೋಡೋಣ ಅಂಥ ಬಂದ್ರೆ ಮಹಾಶಯರು ಯಾರೂ ಇರಲಿಲ್ಲ. ನನ್ನ ವಿರುದ್ಧ ಧಿಕ್ಕಾರ ಹಾಕಿದರೆ ನಾನೇ ನಾಲ್ಗೆ ಸೀಳ್ತಿನಿ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಕೆ ನೀಡಿದರು.

ದೊಡ್ಡವರೇ ಇರಲಿ. ಚಿಕ್ಕವರೇ ಇರಲಿ. ಯಾವಾನಾದ್ರೂ ಸರಿ. ನನ್ನ ಮುಂದೆ ನಿಂತು ಧಿಕ್ಕಾರ ಹಾಕಲಿ. ನಾಲ್ಗೇ ಸೀಳ್ತಿನಿ ಎಂದು ಹೇಳಿದರು.

ರಾಜಣ್ಣನ ಪವರ್ ಕಡಿಮೆ ಆಗಿಲ್ಲ. ನಾವು ಕಾಂಗ್ರೆಸ್ ಕಟ್ಡಿ ಬೆಳೆಸಿದವರು. ಅದನ್ನು ಉಳಿಸುವ ಪ್ರಯತ್ನ ಮಾಡುತ್ತೇವೆ ಎಂದರು

ಡಾ.ಪರಮೇಶ್ವರಗೆ ಉಪಕಾರ ಸ್ಮರಣೆ ಇಲ್ಲ. ಅವರ ಸಹೋದರ ತೀರಿಕೊಂಡ ನೋವಿನಲ್ಲಿದ್ದರು. ಕೊರಟಗೆರೆ ಕ್ಷೇತ್ರದಲ್ಲಿ ಓಡಾಡಿ ಗೆಲ್ಲಿಸಿದ್ದು ನಾವು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಹಳೆಯ ಸ್ನೇಹಿತ. ಅವರು ಗೆದ್ದರೆ, ಮುಖ್ಯಮಂತ್ರಿ ಆದರೆ ಹೆಚ್ಚು ಸಂತೋಷ ಪಡುವ ವ್ಯಕ್ತಿ ನಾನು' ಎಂದರು.

ಶಾಸಕ ಡಿ.ಸಿ.ಗೌರಿಶಂಕರ್ ಬಗ್ಗರ ಮಾತಾಡಲ್ಲ. ನನ್ನ ವಿರುದ್ಧ ಸ್ಪರ್ಧೆ ಮಾಡಲು ನಾನೇ ಆಹ್ವಾನಿಸುತ್ತೇನೆ. ಹಿಂದೆ ಅಲ್ಪ ಮತಗಳಲ್ಲಿ ಗೆದ್ದು ಆಪರೇಷನ್ ಕಮಲಕ್ಕೆ ಹೋಗಿದ್ದ ಎಂದರು.

ಜಿರೊ ಟ್ರಾಫಿಕ್ ನಿಂದ ಪಕ್ಷ ಹಾಳು:
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ಜಿರೊ ಟ್ರಾಫಿಕ್ ಮುಖ್ಯ ಕಾರಣ ( ಡಾ ಜಿ.ಪರಮೇಶ್ವರ ಹೆಸರು ಹೇಳದೆ). ಒಮ್ಮೆ ಬಂದು ಹೋದರೆ 500 ಮತಗಳು ಕಡಿಮೆ ಆಗುತ್ತವೆ. ಅಧಿಕಾರ, ಸೌಲಭ್ಯ, ಸೌಕರ್ಯ ಇದೆ ಬಳಸಿಕೊಳ್ತೀನಿ ಅಂದ್ರೆ ಜನರಿಗೆ ಆಗುವ ತೊಂದರೆಗೆ ಯಾರು ಹೊಣೆ ಎಂದು ಹೇಳಿದರು.

ಚಿನ್ನದ ಚಾಕು ಇದೆ ಎಂದು ಕುತ್ತಿಗೆ ಕೊಯ್ದುಕೊಳ್ಳುವುದಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT