ಮಳೆಯಿಂದ ಮುಳುಗಿದ ಮಡಿಕೇರಿಯ ‘ಶಕ್ತಿ’ ಪತ್ರಿಕಾಲಯ: ಮುದ್ರಣ ಸ್ಥಗಿತ

7

ಮಳೆಯಿಂದ ಮುಳುಗಿದ ಮಡಿಕೇರಿಯ ‘ಶಕ್ತಿ’ ಪತ್ರಿಕಾಲಯ: ಮುದ್ರಣ ಸ್ಥಗಿತ

Published:
Updated:

ಮಡಿಕೇರಿ(ಕೊಡಗು): ಅಟಲ್‌ ಬಿಹಾರಿ ವಾಜಪೇಯಿ ಸಾವಿನಿಂದ ಅವರ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿರುವ ಈ ಸಂದರ್ಭದಲ್ಲಿಯೇ ರಾಜ್ಯದ ಕೊಡಗಿನ ಜನ ಜಲಪ್ರವಾಹದಿಂದ ತತ್ತರಿಸಿದ್ದಾರೆ.

ಮಳೆರಾಯನ ಮುನಿಸಿಗೆ ಮಡಿಕೇರಿಯ ‘ಶಕ್ತಿ’ ಪತ್ರಿಕೆಯೂ ಗುರಿಯಾಗಿದೆ. ಪತ್ರಿಕಾ ಕಚೇರಿ ಮುಕ್ಕಾಲು ಪಾಲು ನೀರಲ್ಲಿ ಮುಳುಗಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಪ್ರಿಂಟಿಂಗ್ ಮೆಷಿನ್‌, ಕಂಪ್ಯೂಟರ್‌ಗಳು, ನ್ಯೂಸ್ ಪ್ರಿಂಟ್‌ಗಳು, ತಾಂತ್ರಿಕ ಸಂಪರ್ಕ ಸಾಧನಗಳು ನೀರು ಬಿದ್ದು ಹಾಳಾಗಿ ಹೋಗಿವೆ. 

‘ಪತ್ರಿಕಾಲಯದಿಂದ ಪರಿಕರಗಳನ್ನು ಹೊರತರಲು ಆಗದಷ್ಟು ನೀರು ತುಂಬಿಕೊಂಡಿದೆ. ಪಕ್ಕದಲ್ಲಿನ ತುಂಬಿ ಹರಿಯುವ ಹೊಳೆ ಮೇಲೆಯೇ ಬೆಟ್ಟ ಕುಸಿದಿದೆ. ಇದರಿಂದ ಹರಿಯುವ ನೀರು ದಿಕ್ಕನ್ನೇ ಬದಲಿಸಿದೆ. ಕಚೇರಿ ಇರುವ ಬಡಾವಣೆಯೂ ನದಿಯಾಗಿ ಮಾರ್ಪಟ್ಟಿದೆ’ ಎಂದು ಪತ್ರಿಕೆಯ ಉದ್ಯೋಗಿಯೊಬ್ಬರು ತಿಳಿಸಿದರು.  

‘ವಿದ್ಯುತ್ ಸಂಪರ್ಕವಿಲ್ಲ. ಮೊಬೈಲ್‌ ಟವರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಇತ್ತ ಮಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಅತ್ತ ಕುಶಾಲನಗರ ಸಂಪರ್ಕವೂ ಕಿತ್ತೋಗಿದೆ. ಕೇರಳ ಲಿಂಕೂ ಬಂದ್ ಆಗಿ ಇಡೀ ಕೊಡಗೇ ಅಕ್ಷರಶಃ ದ್ವೀಪದಂತಾಗಿದೆ’ ಎಂದು ‘ಶಕ್ತಿ’ ಪತ್ರಿಕೆಯ ಉದ್ಯೋಗಿ ಸಂತೋಷ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !