ಶುಕ್ರವಾರ, 26 ಏಪ್ರಿಲ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಕಣ್ಣೀರಿಟ್ಟ ಅಮುಲ್ ಬಾಲಕಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Last Updated 25 ಏಪ್ರಿಲ್ 2018, 2:36 IST
ಅಕ್ಷರ ಗಾತ್ರ
ಅಹಮದಾಬಾದ್: ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಮತ್ತು ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಇತ್ತೀಚೆಗೆ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಗುಜರಾತ್‌ನ ಅಮುಲ್‌ ಡೇರಿಯ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಲಾಗಿರುವ ವ್ಯಂಗ್ಯಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ನೂರಾರು ಮಂದಿ ಇದನ್ನು ಶೇರ್ ಮಾಡಿದ್ದು, ಬೆಂಬಲಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಅಮುಲ್‌ ಸಕಾಲಿಕ: ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ’ ಎಂಬ ಶೀರ್ಷಿಕೆ ಅಡಿ ಬಾಲಕಿ ಕಣ್ಣಿರಿಡುತ್ತಿರುವ ಚಿತ್ರವನ್ನು ಅಮುಲ್ ಫೇಸ್‌ಬುಕ್ ಪುಟದಲ್ಲಿ ಏಪ್ರಿಲ್ 17ರಂದು ಪ್ರಕಟಿಸಲಾಗಿದೆ. ಚಿತ್ರಕ್ಕೆ ‘ಝರಾ ಆಂಖೋ ಮೇ ಭರ್ಲೋ ಪಾನಿ’ ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ. ಇದನ್ನು 900ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದು, 90ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. 8 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಟ್ವಿಟರ್‌ನಲ್ಲಿಯೂ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
‘ಕಠುವಾ ಮತ್ತು ಉನ್ನಾವ್ ಸಂತ್ರಸ್ತೆಯರಿಗಾಗಿ ಅಮುಲ್ ಬಾಲಕಿ ಕಣ್ಣೀರಿಸುತ್ತಿದ್ದಾಳೆ. ಅತ್ಯಾಚಾರಿಗಳಿಗೆ ಮತ್ತು ಅವರನ್ನು ಬೆಂಬಲಿಸುವವರಿಗೆ ನಾಚಿಕೆಯಾಗಬೇಕು’ ಎಂದು ಫಾರೂಕ್‌ ಅಹ್ಮದ್ ಖಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
#AmulGirl crying for #Kathua and #Unao victims.Shame on these rapists and supporters . https://t.co/dzd5pr4iDI
<script async="" src="https://platform.twitter.com/widgets.js" charset="utf-8"/>
‘ಇದು ಭಾವನಾತ್ಮಕವಾಗಿದೆ... ಅಳುತ್ತಿರುವ ಅಮುಲ್ ಬಾಲಕಿಯ ಚಿತ್ರ ದೇಹದಲ್ಲಿ ನಡುಕಹುಟ್ಟಿಸುತ್ತದೆ. ನಮ್ಮ ಮಕ್ಕಳಿಗಾಗಿ ನಾವು ಸರಿಯಾದ ರೀತಿಯಲ್ಲಿ ದೇಶ ಕಟ್ಟುತ್ತಿದ್ದೇವೆಯೇ?’ ಎಂದು ಮಿಹಿರ್ ಉಪಾಧ್ಯಾಯ್ ಎಂಬುವವರು ಟ್ವೀಟ್ ಮಾಡಿದ್ದಾರೆ.
Filled with lot of emotions... A simple picture of Amul Girl crying sends you chills and shivers in your body. Are we building a Right Nation for our children ? #sad https://t.co/HWQn2ErS5I
<script async="" src="https://platform.twitter.com/widgets.js" charset="utf-8"/>
‘ಜಗತ್ತು, ಸಮಾಜ ಎಚ್ಚರಗೊಳ್ಳಬೇಕು. ಇಂಥ ಅಪರಾಧಗಳನ್ನು ಸಹಿಸಲಾಗದು. ನಿರ್ಭಯಾ, ಆಸಿಫಾ, ಉನ್ನಾವ್ ಬಾಲಕಿ, ಅಸ್ಸಾಂ ಬಾಲಕಿ ಮತ್ತು ಪ್ರತಿಯೊಬ್ಬ ಸಂತ್ರಸ್ತೆಯನ್ನು ಅಮುಲ್‌ ಬಾಲಕಿಯಲ್ಲಿ ಕಾಣುತ್ತಿದ್ದೇನೆ... ನಾವು ಮಾನವರಾಗೋಣ... ಮಾನವೀಯತೆಯನ್ನು ರಕ್ಷಿಸೋಣ’ ಎಂದು ರೇಷ್ಮಾ ಖಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
Wake up world...wake up society...no more tolerance for such crimes...i can see nirbhaya, asifa, unnao girl, assam girl & every victim in this crying amul girl...lets be human...save humanity... https://t.co/5fvJsuVbxk
<script async="" src="https://platform.twitter.com/widgets.js" charset="utf-8"/>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT