ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಮುಖ್ಯಪರೀಕ್ಷೆ 1250 ಅಂಕಕ್ಕೆ ಇಳಿಕೆ

Last Updated 2 ಮಾರ್ಚ್ 2020, 19:59 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ (ಗ್ರೂಪ್‌ ‘ಎ’ ಮತ್ತು ‘ಬಿ’) ನೇಮಕಾತಿಗೆ ಕೆಪಿಎಸ್‌ಸಿ ನಡೆಸುವ ಮುಖ್ಯಪರೀಕ್ಷೆಯಲ್ಲಿ ಐಚ್ಚಿಕ ವಿಷಯಗಳನ್ನು (ತಲಾ 250 ಅಂಕಗಳ 2 ಪತ್ರಿಕೆ) ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹೀಗಾಗಿ, ಒಟ್ಟು 1,750 ಅಂಕಗಳಿಗೆ (ಒಟ್ಟು ಏಳು ಪತ್ರಿಕೆಗಳು) ನಡೆಯುತ್ತಿದ್ದ ಮುಖ್ಯಪರೀಕ್ಷೆಯಲ್ಲಿ 500 ಅಂಕ ಕಡಿತಗೊಂಡು, 1,250 ಅಂಕಗಳಿಗೆ ನಿಗದಿ ಆಗಲಿದೆ. ಅಲ್ಲದೆ, ಈವರೆಗೆ 200 ಅಂಕಗಳಿಗೆ ನಡೆಯುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು (ಸಂದರ್ಶನ) 50 ಅಂಕಗಳಿಗೆ ಇಳಿಸಲು ತೀರ್ಮಾನಿಸಿದೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕ ಶೇ 80 ದಾಟಿದರೆ ಅಥವಾ ಶೇ 40ಕ್ಕಿಂತ ಕಡಿಮೆಯಾದರೆ ಸಂದರ್ಶನ ಮಂಡಳಿ ಸದಸ್ಯರು ಕಾರಣ ದಾಖಲಿಸಬೇಕು.

ಈ ಬಗ್ಗೆ ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ನಿಯಮಗಳು– 2020’ರ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆಗೆ 15 ದಿನಗಳ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT