ಶುಕ್ರವಾರ, ನವೆಂಬರ್ 22, 2019
27 °C

ಕುಂದಾಪುರಕ್ಕೆ ಅಂಬಾರಿ ಬಸ್

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಬೆಂಗಳೂರು–ಕುಂದಾಪುರ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್‌ (ಮಲ್ಟಿ ಆ್ಯಕ್ಸಿಲ್ ಎ.ಸಿ ಸ್ಲೀಪರ್) ಬಸ್‌ ಸೇವೆ ಆರಂಭಿಸಿದೆ.

ನ.7ರಿಂದ ಈ ಬಸ್ ಕಾರ್ಯಾಚರಣೆ ಆರಂಭವಾಗಲಿದ್ದು, ಪ್ರಯಾಣ ದರ ₹1 ಸಾವಿರ ನಿಗದಿ ಮಾಡಲಾಗಿದೆ. ರಾತ್ರಿ 10.10ಕ್ಕೆ ಬೆಂಗಳೂರಿನಿಂದ ಹೊರಡುವ ಬಸ್ ಬೆಳಿಗ್ಗೆ 5ಕ್ಕೆ ಮಂಗಳೂರು, 7.30ಕ್ಕೆ ಕುಂದಾಪುರಕ್ಕೆ ತಲುಪಲಿದೆ.

ಕುಂದಾಪುರದಿಂದ ರಾತ್ರಿ 8.45ಕ್ಕೆ ಹೊರಡುವ ಬಸ್, ಮಂಗಳೂರಿಗೆ 11.30ಕ್ಕೆ ಬರಲಿದೆ. ಬೆಂಗಳೂರಿಗೆ ಬೆಳಿಗ್ಗೆ 6ಕ್ಕೆ ತಲುಪಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಪ್ರತಿಕ್ರಿಯಿಸಿ (+)