ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಆಹ್ವಾನಿಸಿದಾಗಲೇ ಬಿಜೆಪಿ ಜತೆ ಹೋಗಲಿಲ್ಲ, ಸಿದ್ದರಾಮಯ್ಯಗಿಂತ ಕೋಮುವಾದಿ ಇಲ್ಲ

Last Updated 27 ಅಕ್ಟೋಬರ್ 2019, 12:29 IST
ಅಕ್ಷರ ಗಾತ್ರ

ಬೆಳಗಾವಿ: ಈಗ ಸರ್ಕಾರ ಬಿದ್ದರೆ,ಹೊಸ ಸರ್ಕಾರ ರಚನೆಯಾಗಲು ಐದು ತಿಂಗಳು ಅಲ್ಲಿಯ ವರೆಗೆ ಜನರನ್ನು ನೋಡುವವರು ಯಾರು? ಇದೇ ಕಾರಣಕ್ಕೆ ಬಿಜೆಪಿ ಸರ್ಕಾರವನ್ನು ಬೀಳಲು ಬಿಡುವುದಿಲ್ಲ ಎಂದಿದ್ದೆ. ನಾನು ನನ್ನನ್ನು ಯಾರಿಗೂ ಬರೆದುಕೊಟ್ಟಿಲ್ಲ. ಪ‍್ರಧಾನಿ ಕರೆದಾಗಲೇ ಬಿಜೆಪಿ ಜತೆಗೆ ಹೋಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

‘ಕೋಮುವಾದಿಗಳನ್ನು ಕುಮಾರಸ್ವಾಮಿ ಬೆಂಬಲಿಸುತ್ತಿದ್ದಾರೆ,’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ‘ಕೋಮುವಾದ ಎಂದರೆ ಏನು, ಸಿದ್ದರಾಮಯ್ಯ ಯಾರು, ತಮ್ಮ ಅಧಿಕಾರವಧಿಯಲ್ಲಿ ಸಿದ್ದರಾಮಯ್ಯ ಯಾವೆಲ್ಲ ವರ್ಗಕ್ಕೆ ಸಮುದಾಯ ಭವನಗಳನ್ನು ನೀಡಿದ್ದಾರೆ, ಅದರಲ್ಲಿ ಎಷ್ಟು ತಾರತಮ್ಯ ಮಾಡಿದ್ದಾರೆ, ಇವರಿಗಿಂತಲೂ ದೊಡ್ಡ ಕೋಮುವಾದಿ ಮತ್ತೊಬ್ಬರಿಲ್ಲ,’ ಎಂದು ಅವರು ಕಿಡಿಕಾರಿದ್ದಾರೆ.

‘ನಾನು ಬಿಜೆಪಿ ಜೊತೆ ಹೋಗುವಂತಿದ್ದರೆ ಲೋಕಸಭೆ ಚುನಾವಣೆಗೆ ಮೊದಲೇ ಹೋಗುತ್ತಿದ್ದೆ. ಪ್ರಧಾನ ಮಂತ್ರಿಯೇ ನನಗೆ ಆಹ್ವಾನ ನೀಡಿದ್ದರು. ನನ್ನನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವುದಾಗಿ ಹೇಳಿದ್ದರು. ನಾವು ಚುನಾವಣೆಗಳ ಹಿಂದೆ ಹೋದರೆ ಜನರನ್ನು ನೋಡುವವರು ಯಾರು? ಸರ್ಕಾರ ಬಿದ್ದು ಹೊಸ ಸರ್ಕಾರ ರಚನೆಯಾಗುವ ಐದು ತಿಂಗಳವರೆಗೆ ಜನ ಏನು ಮಾಡಬೇಕು. ನಾನು ರಾಜಕಾರಣ ಮಾಡುವುದು ವೈಯಕ್ತಿಕ ಲಾಭಕಲ್ಲ. ನನ್ನನ್ನು ಯಾರಿಗೂ ಬರೆದುಕೊಟ್ಟಿಲ್ಲ,’ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT