ವಕೀಲರ ರಕ್ಷಣಾ ಕಾಯ್ದೆ: 12ರಂದ ಕೋರ್ಟ್ ಕಲಾಪದಿಂದ ಹೊರಗುಳಿಯಲು ವಕೀಲರ ನಿರ್ಧಾರ

7

ವಕೀಲರ ರಕ್ಷಣಾ ಕಾಯ್ದೆ: 12ರಂದ ಕೋರ್ಟ್ ಕಲಾಪದಿಂದ ಹೊರಗುಳಿಯಲು ವಕೀಲರ ನಿರ್ಧಾರ

Published:
Updated:

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ವಕೀಲರ ರಕ್ಷಣಾ ಕಾಯ್ದೆ  ಜಾರಿಗೆ ತರಲು ಒತ್ತಾಯಿಸಿ ಇದೇ 12 ರಂದು ಕೋರ್ಟ್ ಕಲಾಪದಿಂದ ಹೊರಗುಳಿಯಲು ಬೆಂಗಳೂರು ವಕೀಲರ ಸಂಘ ನಿರ್ಧರಿಸಿದೆ.

ರಾಜ್ಯದಾದ್ಯಂತ ಎಲ್ಲ ವಕೀಲರ ಸಂಘಗಳೂ ಭಾರತೀಯ ವಕೀಲರ ಪರಿಷತ್ ನ ಈ ಕರೆಗೆ ಓಗೊಟ್ಟು ಕೋರ್ಟ್ ಕಲಾಪದಿಂದ ಹೊರಗುಳಿಯಬೇಕು ಎಂದೂ ಸಂಘ ಮನವಿ ಮಾಡಿದೆ.

ಈ ಕುರಿತಂತೆ ಸೋಮವಾರ ನಡೆದ ಸಂಘದ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಮತ್ತು ಸದಸ್ಯರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !