ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ: ನಗರದ ವಿದ್ಯಾರ್ಥಿಗಳ ಸಾಧನೆ

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರಿಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) 12ನೇ ತರಗತಿ ಪರೀಕ್ಷೆಯಲ್ಲಿ ನಗರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕುಮಾರನ್‌ ಚಿಲ್ಡ್ರನ್‌ ಶಾಲೆಯ ಸಮೀನಾ ಮುಲಾನಿ ಶೇ 99.2ರಷ್ಟು ಅಂಕ ಪಡೆದು ನಗರದಲ್ಲಿಯೇ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಮೀನಾ, ಗಣಿತ ಮತ್ತು ಭೌತವಿಜ್ಞಾನದಲ್ಲಿ 99, ಕಂಪ್ಯೂಟರ್‌ ವಿಜ್ಞಾನದಲ್ಲಿ 100 ಹಾಗೂ ಇಂಗ್ಲಿಷ್‌ನಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.

‘ಶಾಲೆಯಲ್ಲಿ ನೀಡಿದ ಪಠ್ಯ ಹಾಗೂ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಅಭ್ಯಾಸ ಮಾಡಿದ್ದೆ. ಇವು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೆರವಾದವು. ನಿರಂತರ ಪರಿಶ್ರಮ ಉತ್ತಮ ಸಾಧನೆಗೆ ಕಾರಣವಾಯಿತು. ಪ್ರತಿ ದಿನ ನಾಲ್ಕು ತಾಸು ಓದುತ್ತಿದ್ದೆ. ಬಿಡುವಿನ ವೇಳೆಯಲ್ಲಿ ಚಿತ್ರಕಲೆಯಲ್ಲಿ ತೊಡಗಿಕೊಳ್ಳುವೆ’ ಎಂದು ಅನಿಸಿಕೆ ಹಂಚಿಕೊಂಡರು. ಇವರು ಜೆಇಇ ಮುಖ್ಯ ಪರೀಕ್ಷೆಯಲ್ಲಿ 202ನೇ ರ‍್ಯಾಂಕ್‌ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ 97.8 ಅಂಕಗಳಿಸಿರುವ ಡೆಲ್ಲಿ ಪಬ್ಲಿಕ್‌ ಶಾಲೆಯ ಮಾಸಿಹ ಅಹಮದ್‌ಗೆ ಎಂಜಿನಿಯರ್‌ ಆಗುವ ಕನಸಿದೆ. ಇದರ ಜೊತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಇದೆ. ‘ಈಜು ಮತ್ತು ಬ್ಯಾಸ್ಕೆಟ್‌ ಬಾಲ್‌ ಹೆಚ್ಚು ಇಷ್ಟಪಡುವ ಕ್ರೀಡೆಗಳು. ಕಾದಂಬರಿಗಳನ್ನು ಓದುವುದು, ಟಿ.ವಿ ಕಾರ್ಯಕ್ರಮಗಳನ್ನು ವೀಕ್ಷಿಸುವುದು ನನಗಿಷ್ಟ’ ಎಂದು ಆಸಕ್ತಿಗಳ ಪಟ್ಟಿಯನ್ನು ವಿವರಿಸಿದರು.

ವಿಜ್ಞಾನ ವಿಭಾಗದಲ್ಲಿ ಎನ್‌ಪಿಎಸ್‌ನ ಮನೀಶ್‌ ಕೌಶಿಕ್‌, ಸಿದ್ಧಾರ್ಥ್ ಗೌತಮ್, ಮಧುಲಿಕಾ ಗಂಗರಾಜು, ಏಕ್ಯಾ ಶಾಲೆಯ ಎಸ್‌.ಕಾವ್ಯಾ ಎಲ್ಲರೂ ಶೇ 97.2 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಡೆಲ್ಲಿ ಪಬ್ಲಿಕ್‌ ಶಾಲೆಯ ಶೇ 97.6, ಅಭಿಜ್ಞಾ ಚಟರ್ಜಿ ಹಾಗೂ ಅಶ್ವಿನಿ ನಾಗ್‌ ಶೇ 96.6 ಅಂಕಗಳನ್ನು ಪಡೆದಿದ್ದಾರೆ. ‌ಕಲಾ ವಿಭಾಗದಲ್ಲಿ ಡೆಲ್ಲಿ ಪಬ್ಲಿಕ್‌ ಶಾಲೆಯ ಅನುಷ್ಕಾ ರಾಜೇಶ್‌ ಶೇ 96ರಷ್ಟು ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT