ಸ್ಥಳೀಯ ಸಂಸ್ಥೆಗಳ ಚುನಾವಣೆ: ಆ.29ಕ್ಕೆ ಮತದಾನ, ಸೆ.1ಕ್ಕೆ ಫಲಿತಾಂಶ 

7
ಇದೇ ಮೊದಲ ಬಾರಿಗೆ ನಗರಸಭೆ ಚುನಾವಣೆಯಲ್ಲಿ ನೋಟಾ ಮತದಾನಕ್ಕೆ ಅವಕಾಶ

ಸ್ಥಳೀಯ ಸಂಸ್ಥೆಗಳ ಚುನಾವಣೆ: ಆ.29ಕ್ಕೆ ಮತದಾನ, ಸೆ.1ಕ್ಕೆ ಫಲಿತಾಂಶ 

Published:
Updated:

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್ ಶ್ರೀನಿವಾಸಾಚಾರಿ ಅವರು ಗುರುವಾರ ಮಾತನಾಡಿದರು. 

2013ರಲ್ಲಿ 208 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಈಗ ಎರಡು ಹಂತದಲ್ಲಿ ಚುನಾವಣೆ ಮಾಡುವ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದರು. 

ಹಾಲಿ 108 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತೇವೆ. ತಕ್ಷಣದಿಂದಲೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೊಳಿಸುವ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಚುನಾವಣಾ ತಯಾರಿ ಕುರಿತು ಸೂಚನೆ ನೀಡಲಾಗಿತ್ತು. ಈಗಾಗಲೇ ತಯಾರಿ ಆಗಿದೆ ಎಂದರು.

ಮೊದಲ ಹಂತದಲ್ಲಿ 29 ನಗರಸಭೆಗಳ 927 ವಾರ್ಡ್‌ಗಳಿಗೆ, 53 ಪುರಸಭೆಗಳ 1247 ವಾರ್ಡ್‌ಗಳಿಗೆ ಹಾಗೂ 23 ಪಟ್ಟಣ ಪಂಚಾಯಿತಿಗಳ 400 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.

25 ಹಿರಿಯ ಕೆಎಎಸ್ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು. 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಹಾಗೂ ಚಿಕ್ಕಮಗಳೂರು, ಮೊದಲ ಹಂತದಲ್ಲಿ ಚುನಾವಣೆ ನಡೆಯುವುದಿಲ್ಲ. ಈ ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ಘೋಷಣೆಯಾಗಲಿದೆ.

ಚುನಾವಣೆಯ ಸಂಪೂರ್ಣ ವಿವರ
ಚುನಾವಣೆ ಸಂಬಂಧ ಇದೇ 10ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. 
* ಆಗಸ್ಟ್‌ 17ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.  
* ಆಗಸ್ಟ್‌ 18ರಂದು ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. 
* ಆಗಸ್ಟ್‌ 20ರಂದು ನಾಮಪತ್ರ ಹಿಂಪಡೆಯುವ‌ ಕೊನೆಯ ದಿನವಾಗಿದೆ. 
* ಆಗಸ್ಟ್‌ 29ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನದ ನಡೆಯಲಿದೆ. 
* ಇದೇ ಮೊದಲ ಬಾರಿಗೆ ನಗರಸಭೆ ಚುನಾವಣೆಯಲ್ಲಿ ನೋಟಾ ಮತದಾನಕ್ಕೆ ಅವಕಾಶ ನೀಡಲಾಗಿದೆ. 
* ಮರು ಮತದಾನ ಅಗತ್ಯವಿದ್ದರೆ ಆಗಸ್ಟ್‌ 31 ರಂದು ನಡೆಸಲಾಗುತ್ತದೆ. ಜತೆಗೆ, ಸೆ. 1ರಂದು ಮತ ಏಣಿಕೆ ನಡೆಯಲಿದೆ. 
* ಮೊದಲ ಹಂತದಲ್ಲಿ 22 ಜಿಲ್ಲೆಗಳ 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.

105 ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ‌ ಮತದಾರರ ಸಂಖ್ಯೆ.
ಪುರುಷರು -17, 96,001
ಮಹಿಳೆಯರು - 18,07,336 
ಇತರೆ - 354
ಒಟ್ಟು - 36,03691


ಚುನಾವಣೆ ನಡೆಯಲಿರುವ 105 ನಗರ ಸ್ಥಳೀಯ ಸಂಸ್ಥೆಗಳು.
ನಗರಸಭೆ -29
ಪುರಸಭೆ -53 
ಪಟ್ಟಣಪಂಚಾಯಿತಿ -23
ಒಟ್ಟು ಮತಗಟ್ಟೆಗಳು -3897

ಅಭ್ಯರ್ಥಿಗಳ ಚುನಾವಣಾ ವೆಚ್ಚ.
ನಗರಸಭೆ:  ₹2 ಲಕ್ಷ
ಪುರಸಭೆ: ₹1.5 ಲಕ್ಷ
ಪಟ್ಟಣ ಪಂಚಾಯಿತಿ: 1ಲಕ್ಷ
 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !