ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಮೋದಿ ಮಾಡಿದ Plogging? ಇಲ್ಲಿದೆ ನೋಡಿ...

Last Updated 12 ಅಕ್ಟೋಬರ್ 2019, 7:05 IST
ಅಕ್ಷರ ಗಾತ್ರ

ಬೆಂಗಳೂರು:ಮಾಮಲ್ಲಪುರಂನ ಕಡಲ ತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳ್ಳಂಬೆಳಿಗ್ಗೆ ’ಪ್ಲಾಗಿಂಗ್‌‘(Plogging) ಮಾಡಿದ್ದಾರೆ.

ಪ್ರಧಾನಿ ಕಡಲತೀರದಲ್ಲಿ ವಾಯು ವಿಹಾರ ಮಾಡಿರಬಹುದು ಎಂದುಕೊಂಡರೆ ನಮ್ಮ ಆ ಕಲ್ಪನೆ ತಪ್ಪು. ಅವರು ಬರೀ ವಾಯು ವಿಹಾರ ಮಾಡಲಿಲ್ಲ. ಬದಲಿಗೆ, ’ಪ್ಲಾಗಿಂಗ್‌‘ ಮಾಡಿದರು.

ಅಂದಹಾಗೆPlogging ಎಂದರೇನು? ಎಂಬ ಕುತೂಹಲ ಮೂಡುತ್ತದೆ.

‘ಪ್ಲಾಗಿಂಗ್‌‘ ಎಂದರೆ ವಾಯುವಿಹಾರ(ಜಾಗಿಂಗ್‌) ಮಾಡುತ್ತಾ ಜತೆ ಜತೆಗೆ, ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯ ಮತ್ತು ಕಸವನ್ನು ಹೆಕ್ಕುವುದು.

‘ಪ್ಲಾಗಿಂಗ್‌‘ ಎನ್ನುವುದು ಪ್ಲಾಸ್ಟಿಕ್‌ ಕಸ ಹೆಕ್ಕುವ ಮತ್ತು ಜಾಗಿಂಗ್‌ನ ಸಂಯೋಜನೆಯಾಗಿದೆ. ಸ್ವೀಡಿಷ್‌ ಭಾಷೆಯಲ್ಲಿ ‘ಪ್ಲೊಕಾ ಅಪ್‌’(plocka upp) ಎಂದರೆ ಕಸ ಅಥವಾ ತ್ಯಾಜ್ಯ ಎಂದರ್ಥ. ಪ್ಲಾಸ್ಟಿಕ್‌ನಿಂದಾಗುವಮಾಲಿನ್ಯ ತಡೆಯ ಕಾಳಜಿಯಾಗಿ 2016ರಲ್ಲಿ ಸ್ವೀಡನ್‌ನಲ್ಲಿ ಸಮೂಹ ಸಂಘಟಿತ ಚಟುವಟಿಕೆಯಾಗಿ ಪ್ರಾರಂಭವಾಯಿತು. 2018ರಲ್ಲಿ ಇತರ ದೇಶಗಳಿಗೂ ಇದು ಹರಡಿತು.

ಇದು ದೈಹಿಕ ಕಸರತ್ತು ಮತ್ತು ಚಟುವಟಿಕೆಯಪರಿಕಲ್ಪನೆಯಾಗಿದ್ದು, ನಡಿಗೆ(ವಾಕಿಂಗ್), ಓಟ, ಬಾಗುವುದು, ಕುಳಿತುಕೊಳ್ಳುವುದು ಮತ್ತು ದೇಹವನ್ನು ತಿರುಚಿ, ಎಳೆದಿಡುವ ಚಟುವಟಿಕೆಗಳ ಮೂಲಕ ಅಲ್ಲಲ್ಲಿ ಬಿದ್ದ ಕಸ, ಪ್ಲಾಸ್ಟಿಕ್‌ಗಳನ್ನು ಬಾಗಿ, ಕುಳಿತು, ಅತ್ತಿತ್ತ ಹೊರಳಿ ಕಸವನ್ನು ಹೆಕ್ಕುವುದು. ಇಲ್ಲಿ ಕಸ ಹೆಕ್ಕುವ ಮತ್ತು ದೇಹಕ್ಕೆ ಚಟುವಟಿಕೆ ಒದಗಿಸುವ ಎರಡು ಕೆಲಸ ಒಟ್ಟೊಟ್ಟಿಗೆ ನಡೆಯುತ್ತವೆ.

ಲೇಖಕ ಡೇವಿಡ್‌ ಸೆಡಾರಿಸ್‌ ಎಂಬುವರು ಇಂಗ್ಲೆಂಡ್‌ನ ಪಶ್ಚಿಮ ಸಸೆಕ್ಸ್‌ನ ಪರ್ಮ್, ಕೋಲ್ಡ್ವಾಲ್ಥಾಮ್‌ ಮತ್ತು ಸ್ಟೋರಿಂಗ್ಟನ್ ಜಿಲ್ಲೆಗಳಲ್ಲಿ ಕಸವನ್ನು ಹೆಕ್ಕಲು ಈ ‍ಪ್ಲಾಗಿಂಗ್‌ ಅನ್ನು ಸಂಯೋಜಿಸಿದ್ದರು. ಸ್ಥಳೀಯವಾಗಿ ಬಿದ್ದಿರುತ್ತಿದ್ದ ತ್ಯಾಜವನ್ನು ಹೆಕ್ಕಲು ಅವರು ನಿತ್ಯ 60 ಸಾವಿರ ಹೆಜ್ಜೆಗಳ ಜಾಗಿಂಗ್‌ ಮಾಡುತ್ತಾರೆ. ಅವರು ತಮ್ಮ ನೆರೆಹೊರೆಯನ್ನು ಸ್ವಚ್ಛವಾಗಿಡಲು ನಡೆಸಿದ ಪರಿಣಾಮಕಾರಿ ಕಾರ್ಯಕ್ಕೆ ಸ್ಥಳೀಯ ಪ್ರಾಧಿಕಾರವು ಅವರ ಗೌರವಾರ್ಥ ತ್ಯಾಜ್ಯ ಸಂಗ್ರಹ ವಾಹನಗಳಿಗೆ ಅವರ ಹೆಸರನ್ನು ಇರಿಸಿದೆ. ‘ತ್ಯಾಜ್ಯ ಸಂಗ್ರಹ ಟ್ರಕ್‌ಗಳಿಗೆ ಡೇವಿಡ್‌ ಅವರ ಹೆಸರನ್ನು ಇರಿಸಿ, ದಣಿವರಿಯದ ಅವರ ಪ್ರಯತ್ನಗಳಿಗೆ ಧನ್ಯವಾದ ಹೇಳುವ ಕೆಲಸವನ್ನು ಮಾಡಿದ್ದೇವೆ’ಎಂದು ಪ್ರಾಧಿಕಾರ ಹೇಳಿಕೊಂಡಿದೆ.

ಬೆಂಗಳೂರಲ್ಲಿ ಪ್ಲಾಗ್‌ ರನ್

ಸಾರ್ವಜನಿಕ ಸ್ಥಳಗಳನ್ನು ಪ್ಲಾಸ್ಟಿಕ್‌ ಕಸದಿಂದ ಮುಕ್ತಗೊಳಿಸುವ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬಿಬಿಎಂಪಿಯುಗೋ ನೇಟಿವ್‌, ಯುನೈಟೆಡ್‌ ವೇ ಬೆಂಗಳೂರು, ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್ ಹಾಗೂ ಲೆಟ್ಸ್‌ ಬಿ ದ ಚೇಂಜ್‌ ಸಂಸ್ಥೆಗಳ ಸಹಯೋಗದಲ್ಲಿ ಅ. 2ರಂದು ಬೆಂಗಳೂರು ನಗರದ 50 ರಸ್ತೆಗಳಲ್ಲಿ ವಿನೂತನ ‘ಪ್ಲಾಗ್‌ ರನ್‌’ ಕಾರ್ಯಕ್ರಮ ಆಯೋಜಿಸಿತ್ತು. ಮೊದಲ ಬಾರಿಗೆ ಇಂಥಹ ವಿನೂತನ ಪ್ರಯತ್ನಕ್ಕೆ ಬಿಬಿಎಂಪಿ ಮುಂದಾಗಿತ್ತು.

ಮಂಡ್ಯದಲ್ಲಿಅ.2ರಂದು ‘ಪ್ಲಾಗಿಂಗ್‌‘ ರನ್‌ ಹೆಸರಿನಲ್ಲಿ ಮ್ಯಾರಥಾನ್‌ ನಡೆಸಿದ ವಿದ್ಯಾರ್ಥಿಗಳು ಸ್ವಚ್ಛತಾ ಜಾಗೃತಿ ಮೂಡಿಸಿದ್ದರು.
ಮಂಡ್ಯದಲ್ಲಿಅ.2ರಂದು ‘ಪ್ಲಾಗಿಂಗ್‌‘ ರನ್‌ ಹೆಸರಿನಲ್ಲಿ ಮ್ಯಾರಥಾನ್‌ ನಡೆಸಿದ ವಿದ್ಯಾರ್ಥಿಗಳು ಸ್ವಚ್ಛತಾ ಜಾಗೃತಿ ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT