ಬೆಂಗಳೂರು: ಮಂಗಳೂರು ಗಲಭೆ ಕುರಿತು ಸಿಐಡಿ ಹಾಗೂ ನ್ಯಾಯಾಂಗತನಿಖೆ ನಡೆಸಲಾಗುವುದು ಎಂದುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ, ಗೋಲಿಬಾರ್, ಇಬ್ಬರ ಸಾವಿನ ಪ್ರಕರಣಗಳ ಕುರಿತು ವಿಚಾರಣೆ (ಮಾಜಿಸ್ಟೀರಿಯಲ್) ನಡೆಸಲು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿನೇಮಿಸಲಾಗಿದೆ. ಮೂರು ತಿಂಗಳಿನಲ್ಲಿ ವರದಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸಿಐಡಿ ತನಿಖೆ ಆದೇಶ ಇನ್ನಷ್ಟೇ ಹೊರಬೀಳಬೇಕಾಗಿದೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿದ ಯಡಿಯೂರಪ್ಪ, ಮಂಗಳೂರುಗಲಭೆಗೆ ಕೇರಳದಿಂದ ಬಂದವರೇ ಕಾರಣ. ಪೊಲೀಸ್ ಠಾಣೆಗೆ ಕೆಲವರು ಬೆಂಕಿ ಹಚ್ಚಲು ಯತ್ನಿಸಿದ್ದರಿಂದ ಗೋಲಿಬಾರ್ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಬಿಡಲಾಗದು. ಈ ವಿಚಾರ ಇಟ್ಟುಕೊಂಡು ವಿರೋಧ ಪಕ್ಷಗಳು ಗೃಹ ಸಚಿವರ ರಾಜೀನಾಮೆ ಕೇಳುತ್ತಿವೆ. ತಲೆ ಕೆಟ್ಟವರು ಇಂತಹ ಒತ್ತಾಯ ಮಾಡುತ್ತಾರೆ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.