ರಾಯರಿಗೆ ‘ನಾದಹಾರ’ ಸಮರ್ಪಣೆ

ಶನಿವಾರ, ಮಾರ್ಚ್ 23, 2019
31 °C

ರಾಯರಿಗೆ ‘ನಾದಹಾರ’ ಸಮರ್ಪಣೆ

Published:
Updated:
Prajavani

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 424ನೇ ಜನ್ಮದಿನದ ನಿಮಿತ್ತ ಮಂತ್ರಾಲಯದಲ್ಲಿ ಬುಧವಾರ ವರ್ಧಂತಿ ಉತ್ಸವ ಸಂಭ್ರಮ, ಸಡಗರದೊಂದಿಗೆ ನೆರವೇರಿಸಲಾಯಿತು.

ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಮಹಾಭಿಷೇಕ ಮತ್ತು ವೈವಿಧ್ಯಮಯ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿದರು. ತಿರುಪತಿಯಿಂದ ತರಲಾಗಿದ್ದ ತಿರುಮಲ ವೆಂಕಟೇಶ್ವರ ದೇವರ ಶೇಷವಸ್ತ್ರವನ್ನು ವಾದ್ಯ ವೈಭವದೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀ ಸುಬುಧೇಂದ್ರ ತೀರ್ಥರು ಮಠದ ಮಹಾದ್ವಾರದಲ್ಲಿ ಶೇಷವಸ್ತ್ರವನ್ನು ಶಿರದ ಮೇಲಿಟ್ಟುಕೊಂಡು ಸಂಚರಿಸಿದರು.

ಚೆನ್ನೈನಿಂದ ಬಂದ 400ಕ್ಕೂ ಹೆಚ್ಚು ವಾದ್ಯ ಕಲಾವಿದರು ಮಠದ ಪ್ರಾಕಾರದಲ್ಲಿ ಆಸೀನರಾಗಿ ನಿರಂತರವಾಗಿ ಗಾಯನ ಮತ್ತು ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿದರು. ರಾಯರಿಗೆ ನಾದಹಾರ ಸಮರ್ಪಣೆ ಮಾಡಿದರು.ವಯೊಲಿನ್, ಘಟಂ, ಮೃದಂಗ, ಕೊಳಲು, ಹಾರ್ಮೊನಿಯಂ ಸೇರಿದಂತೆ ನಾನಾ ವಿಧದ ವಾದ್ಯನಾದವು ಭಕ್ತ ಸಮೂಹದ ಮನಸೂರೆಗೊಂಡಿತು.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !