ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಪಾಲಿಕೆಯಲ್ಲಿ ಗೆಲುವಿನ ನಗೆ ಬೀರಿದ ಈಕೆ ಪಿಎಚ್‌.ಡಿ ಪದವೀಧರೆ

Last Updated 3 ಸೆಪ್ಟೆಂಬರ್ 2018, 5:02 IST
ಅಕ್ಷರ ಗಾತ್ರ

ಮೈಸೂರು: 'ಪಿಎಚ್.ಡಿ ಮಾಡಿ ಸ್ವಾವಲಂಬಿ ಆಗಬೇಕು ಎನ್ನುವುದು ನನ್ನ ಆಶಯ. ಪಾಲಿಕೆ‌ ಚುನಾವಣೆಯಲ್ಲಿ ಗೆದ್ದಿದ್ದು ನಾನೇ ಕೆಲಸ ಮಾಡುವೆ. ಗಂಡನನ್ನು ಮುಂದೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ...'

ಹೀಗೆ ಹೇಳಿದ್ದು ಬಿಜೆಪಿಯ 65ನೇ ವಾರ್ಡಿನಿಂದ ಗೆಲುವು ಸಾಧಿಸಿರುವ ಡಾ.ಅಶ್ವಿನಿ ಶರತ್. ಮಹಿಳೆ ಉನ್ನತ ಶಿಕ್ಷಣ ಪಡೆದು ರಾಜಕೀಯಕ್ಕೆ ಬರಬೇಕು. ಗಂಡನನ್ನು ಅವಲಂಬಿಸಿ ರಾಜಕಾರಣ ಮಾಡಬಾರದು ಎನ್ನುವುದು ಇವರ ನಂಬಿಕೆ.

ಶಿಕ್ಷಣ(ಎಜುಕೇಶನ್) ವಿಷಯದಲ್ಲಿ ಇವರು ಪಿಎಚ್.ಡಿ ಮಾಡಿದ್ದಾರೆ. ಇಲ್ಲಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಡಾ.ಎನ್.ಎಂ.ಪ್ರಹ್ಲಾದ್ಅವರ ಮಾರ್ಗದರ್ಶನದಲ್ಲಿ, 'ಲೀಡರ್ ಶಿಪ್ ಬಿಹೇವಿಯರ್ ಆಫ್ ಪ್ರಿನ್ಸಿಪಾಲ್ಸ್ ಆಫ್ ಬಿಎಡ್ ಕಾಲೇಜಸ್. ಇನ್ ರಿಲೇಷನ್‌ ಟು ದೇರ್ ಜಾಬ್ ಇನ್‌ವಾಲ್ವ್‌ಮೆಂಟ್' ವಿಷಯದಲ್ಲಿ ಪ್ರೌಢಪ್ರಬಂಧ ಮಂಡಿಸಿದ್ದಾರೆ.

'ಕಳೆದ‌ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೆ. ಆಗಿನ್ನೂ ಪಿಎಚ್.ಡಿ ಮಾಡುತ್ತಿದ್ದೆ. ಮಗ ಚಿಕ್ಕವನಿದ್ದ. ಗೆಲ್ಲಲು ಆಗಿರಲಿಲ್ಲ. ಈಗ ಪಿಎಚ್‌ಡಿ ಮುಗಿದಿದ್ದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ವಾರ್ಡಿನ ನನ್ನ ಕಚೇರಿಗೆ ಜನತೆ ಯಾವ ಸಮಯದಲ್ಲಾದರೂ ಬಂದು ತಮ್ಮ ಸಮಸ್ಯೆ, ಬೇಡಿಕೆ ಹೇಳಿಕೊಳ್ಳಬಹುದು. ನಾನೇ ಖುದ್ದಾಗಿ ಬಗೆಹರಿಸುವೆ' ಎಂದು ಗೆಲುವಿನ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT