ತುಮಕೂರು: ‘ಮಾತುಗಳನ್ನು ವಿಕೃತಗೊಳಿಸಿ ಆ ಮಾತುಗಳಿಗೆ ತಮಗೆ ಬೇಕಾದಂತೆ ಅರ್ಥ ಕಲ್ಪಿಸಿ ತೇಜೋವಧೆ ಮಾಡುವ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಮಾಜಿ ಸಚಿವ ವೈ.ಕೆ.ರಾಮಯ್ಯ ಹೆಸರಿನಲ್ಲಿ ನೀಡುವ ಕೃಷಿಕ, ಕೃಷಿ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ‘ಜನರು ಇಂದು ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಸತ್ಯ–ಸುಳ್ಳಿನ ಬಗ್ಗೆ ಯೋಚಿಸುತ್ತಿಲ್ಲ’ ಎಂದರು.
ಇಂದಿನ ರಾಜಕಾರಣ ಸಹ ತಪ್ಪು ದಿಕ್ಕಿಗೆ ಸಾಗುತ್ತಿದೆ. ರಾಜಕಾರಣ ಏಕೆ ಮಾಡುತ್ತಿದ್ದೇವೆ, ಯಾರಿಗಾಗಿ ಮಾಡುತ್ತಿದ್ದೇವೆ ಎನ್ನುವ ಪರಿವೇ
ರಾಜಕಾರಣಿಗಳಿಗೆ ಇಲ್ಲ. ಈ ಹಿಂದೆ ಇಂತಹ ಸ್ಥಿತಿ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ ಟೊಳ್ಳು ಆಗುತ್ತಿರುವುದು ಬೇಸರದ ಸಂಗತಿ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.