ಮಾರಾಟವಾಗಲು ಬದನೆಕಾಯಿ ಅಲ್ಲ: ಶಾಸಕ ಸಿ.ಎಸ್‌. ಶಿವಳ್ಳಿ

7

ಮಾರಾಟವಾಗಲು ಬದನೆಕಾಯಿ ಅಲ್ಲ: ಶಾಸಕ ಸಿ.ಎಸ್‌. ಶಿವಳ್ಳಿ

Published:
Updated:

ಹುಬ್ಬಳ್ಳಿ: ‘ಮಾರಾಟವಾಗಲು ನಾನೇನು ಬದನೆಕಾಯಿ ಅಲ್ಲ’ ಎಂದು ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ ಹೇಳಿದರು.

ಆಪರೇಷನ್‌ ಕಮಲ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗುರುವಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆಪರೇಷನ್ ಕಮಲಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ. ಇದಕ್ಕಾಗಿ ಹಿರಿಯ ನಾಯಕರಿಗೆ ಮನವಿಯನ್ನೂ ಮಾಡಿದ್ದೇನೆ. ಅವಕಾಶ ಸಿಗದೆ ಇದ್ದರೂ ಆ ವಿಷಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !