ಶಾಸಕರ ಮಧ್ಯೆ ಗಲಾಟೆ ಆ‌ಗಿರುವುದು ನಿಜ: ಸಿದ್ದರಾಮಯ್ಯ

7

ಶಾಸಕರ ಮಧ್ಯೆ ಗಲಾಟೆ ಆ‌ಗಿರುವುದು ನಿಜ: ಸಿದ್ದರಾಮಯ್ಯ

Published:
Updated:

ಕೊಪ್ಪಳ: 'ಈಗಲ್ಟನ್ ರೆಸಾರ್ಟ್‌ನಲ್ಲಿ ಶಾಸಕರ ನಡುವೆ ರಾತ್ರಿ ಏನೋ ಗಲಾಟೆ ಆಗಿದೆಯಂತೆ. ಬೆಂಗಳೂರಿಗೆ ಹೋಗಿ ಮಾಹಿತಿ ಪಡೆಯುತ್ತೇನೆ' ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಗಂಗಾವತಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕರಾದ ಜೆ.ಎನ್.ಗಣೇಶ, ಆನಂದ್ ಸಿಂಗ್ ನಡುವೆ ಗಲಾಟೆ ಆಗಿದೆಯಂತೆ. ಶನಿವಾರ ರಾತ್ರಿಯೇ ಮಾಹಿತಿ ಬಂದಿದೆ. ಮಾಧ್ಯಮಗಳ ಮೂಲಕವೂ ತಿಳಿದಿದೆ. ಯಾರದು ತಪ್ಪು, ಏನು ಎಂಬುದು ಅಲ್ಲಿಗೆ ಹೋದ ನಂತರವೇ ಗೊತ್ತಾಗಲಿದೆ‘ ಎಂದು ಹೇಳಿದರು.

‘ಯಡಿಯೂರಪ್ಪ ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕು ಅಂದುಕೊಂಡಿದ್ದಾರೆ. ಪದೇ, ಪದೇ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಆರ್‌ಎಸ್‌ಎಸ್‌ನವರಿಗೆ ಸಂಸ್ಕೃತಿಯೇ ಗೊತ್ತಿಲ್ಲ‘ ಎಂದು ಹರಿಹಾಯ್ದರು.

'ಈಶ್ವರಪ್ಪನ ನಾಲಿಗೆಗೆ ಕೆಟ್ಟ ಪದ ಬಿಟ್ಟು ಬೇರೇನೂ ಬರಲ್ಲ. ಅವನಿಗೆ ಒಳ್ಳೆಯ ಭಾಷೆಯೇ ಗೊತ್ತಿಲ್ಲ' ಎಂದು ಈಶ್ವರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದರು.

ಬರಹ ಇಷ್ಟವಾಯಿತೆ?

 • 19

  Happy
 • 5

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !