ಗುರುವಾರ , ನವೆಂಬರ್ 14, 2019
26 °C
ಬನ್ನಿಮಂಟಪ ಮೈದಾನದಲ್ಲಿ ಯೋಧರಿಂದ ಸಾಹಸ

ದಸರಾ ವೈಮಾನಿಕ ಪ್ರದರ್ಶನ ನಾಳೆ

Published:
Updated:

ಮೈಸೂರು: ದಸರಾ ಪ್ರಯುಕ್ತ ಭಾರತೀಯ ವಾಯುಪಡೆ ಸಹಯೋಗದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದ್ದು, ಸ್ಥಳೀಯರು ಮತ್ತು ಪ್ರವಾಸಿಗರಿಗೆ ಯೋಧರ ಸಾಹಸ ನೋಡುವ ಅವಕಾಶ ಲಭಿಸಲಿದೆ.

ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಅ.2 ರಂದು ಬೆಳಿಗ್ಗೆ 11.30 ರಿಂದ ಏರ್‌ ಷೋ ನಡೆಯಲಿದೆ. ಸುಮಾರು 40 ನಿಮಿಷ ವೈಮಾನಿಕ ಪ್ರದರ್ಶನ ಇರಲಿದ್ದು, ವಾಯುಪಡೆಯ ‘ಏರ್‌ ಡೆವಿಲ್‌’, ‘ಆಕಾಶ ಗಂಗಾ‘ ತಂಡಗಳು ಪ್ರದರ್ಶನ ನೀಡಲಿವೆ.

ಈ ಬಾರಿಯೂ ಮೂರು ರೀತಿಯ ಪ್ರದರ್ಶನ ಇರಲಿದೆ. ಮೊದಲು ಯೋಧರು ಹೆಲಿಕಾಪ್ಟರ್‌ಗಳಿಂದ ಧರೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ಹಗ್ಗದ ಮೂಲಕ ಮೈದಾನಕ್ಕೆ ಇಳಿದು ಅಣಕು ಯುದ್ಧ ಪ್ರದರ್ಶನ ನೀಡುವರು. ಕೊನೆಯಲ್ಲಿ ಪ್ಯಾರಾಚೂಟ್‌ ಧರಿಸಿ ಜಿಗಿದು ಮೈನವಿರೇಳಿಸುವ ಕಸರತ್ತು ತೋರಿಸಲಿದ್ದಾರೆ.

ಉಚಿತ ಪ್ರವೇಶ: ಏರ್‌ ಷೋ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಯಾವುದೇ ಗೇಟ್‌ ಮೂಲಕವೂ ಮೈದಾನದೊಳಗೆ ಪ್ರವೇಶಿಸಬಹುದು. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗೋಲ್ಡ್‌ ಕಾರ್ಡ್ ಲಭ್ಯ: ಅ.1 ರಿಂದ ಆನ್‌ಲೈನ್‌ನಲ್ಲಿ ‘ದಸರಾ ಗೋಲ್ಡ್‌ ಕಾರ್ಡ್‌’ ಮಾರಾಟಕ್ಕೆ ಲಭ್ಯವಾಗಲಿದೆ. ಪ್ರತಿ ಕಾರ್ಡ್‌ಗೆ ತಲಾ ₹ 4,000 ದರ ನಿಗದಿಪಡಿಸಲಾಗಿದ್ದು, ಒಟ್ಟು 2000 ಕಾರ್ಡ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಗೋಲ್ಡ್‌ ಕಾರ್ಡ್‌ ಹೊಂದಿರುವವರಿಗೆ ಜಂಬೂ ಸವಾರಿ ಮತ್ತು ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ವಿಶೇಷ ಆಸನದ ವ್ಯವಸ್ಥೆ ಇರಲಿದೆ.

ಪ್ರತಿಕ್ರಿಯಿಸಿ (+)