ಲಿಫ್ಟ್‌ನಲ್ಲಿ ಸಿಲುಕಿದ್ದ ನಾಗಠಾಣ ಶಾಸಕ ದೇವಾನಂದ ಚವ್ಹಾಣ

7

ಲಿಫ್ಟ್‌ನಲ್ಲಿ ಸಿಲುಕಿದ್ದ ನಾಗಠಾಣ ಶಾಸಕ ದೇವಾನಂದ ಚವ್ಹಾಣ

Published:
Updated:
Deccan Herald

ಬೆಂಗಳೂರು: ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ‘ತನೇರಿಯಾ’ ಸೀರೆ ಮಾರಾಟ ಮಳಿಗೆಗೆ ಶನಿವಾರ ಹೋಗಿದ್ದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಅವರ ಪತ್ನಿ, ಮಳಿಗೆಯ ಲಿಫ್ಟ್‌ನಲ್ಲಿ 15 ನಿಮಿಷ ಸಿಲುಕಿದ್ದರು.

ಸಂಜೆ 7.30 ಗಂಟೆ ಸುಮಾರಿಗೆ ಮಳಿಗೆ ಹೋಗಿದ್ದ ದೇವಾನಂದ್, ಕಟ್ಟಡದ ಮೇಲಿನ ಮಹಡಿಗೆ ಹೋಗಲೆಂದು ಪತ್ನಿ ಜೊತೆಯಲ್ಲಿ ಲಿಫ್ಟ್‌
ಹತ್ತಿದ್ದರು.

ದಿಢೀರ್‌ ಬಂದ್ ಆಗಿದ್ದ ಲಿಫ್ಟ್‌, 6 ಅಡಿಯಷ್ಟು ಕೆಳಗೆ ಕುಸಿದು ನಿಂತಿತ್ತು. ವಿದ್ಯುತ್‌ ಸಂಪರ್ಕ ಕಡಿತಗೊಂಡು ಲಿಫ್ಟ್‌ನಲ್ಲಿ ಕತ್ತಲು ಆವರಿಸಿತ್ತು. ಸಹಾಯಕ್ಕಾಗಿ ದೇವಾನಂದ್ ಕೂಗಾಡಲಾರಂಭಿಸಿದ್ದರು. ಮಳಿಗೆಯ ಸಿಬ್ಬಂದಿ, ಲಿಫ್ಟ್‌ ದುರಸ್ತಿಗೊಳಿಸಿ 15 ನಿಮಿಷಗಳ ನಂತರ ಶಾಸಕ ಹಾಗೂ ಅವರ ಪತ್ನಿಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು.

‘ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. ಮಳಿಗೆಯವರು ಲಿಫ್ಟ್‌ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಅವರ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ದೇವಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಉಡಾನ್‌–3 ಯೋಜನೆಗೆ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆ

ಬೆಳಗಾವಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಉಡಾನ್‌– 3 ಯೋಜನೆಗೆ ಇಲ್ಲಿನ ನಿಲ್ದಾಣ ಆಯ್ಕೆಯಾಗಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಯೋಜನೆಯಡಿ ಆಯ್ಕೆಯಾಗುವ ನಿಲ್ದಾಣಗಳಿಂದ ಹಾರಾಟ ನಡೆಸುವ ವಿಮಾನಗಳಿಗೆ ವಿಶೇಷ ರಿಯಾಯಿತಿ ಸೌಲಭ್ಯಗಳು ದೊರೆಯುತ್ತವೆ’ ಎಂದು ಹೇಳಿದರು.

ಕಡಿಮೆ ದರ: ‘ಒಂದು ಗಂಟೆಗಿಂತ ಕಡಿಮೆ ಪ್ರಯಾಣದ ಅವಧಿ ಅಥವಾ 500 ಕಿ.ಮೀ ಅಂತರದೊಳಗಿನ ನಗರಗಳಿಗೆ ಹೊರಡುವ ವಿಮಾ
ನಗಳ ಶೇ 50ರಷ್ಟು ಆಸನಗಳಿಗೆ ಸರ್ಕಾರವು ₹2,500 ನಿಗದಿಪಡಿಸಿದೆ. ಇನ್ನುಳಿದ ವ್ಯತ್ಯಾಸದ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗಳಿಗೆ ನೀಡುತ್ತದೆ’ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !