ಬಿಚ್ಚಿಕೊಳ್ಳದ ರಾಷ್ಟ್ರಧ್ವಜ: ಕೆಳಗಿಳಿಸಿ ಬಿಚ್ಚಿ ಹಾರಿಸಿದರು...!

7

ಬಿಚ್ಚಿಕೊಳ್ಳದ ರಾಷ್ಟ್ರಧ್ವಜ: ಕೆಳಗಿಳಿಸಿ ಬಿಚ್ಚಿ ಹಾರಿಸಿದರು...!

Published:
Updated:

ಬೆಳಗಾವಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ರಮೇಶ ಜಾರಕಿಹೊಳಿ ಧ್ವಜಾರೋಹಣ ಮಾಡಿದಾಗ ರಾಷ್ಟ್ರಧ್ವಜ ತೆರೆದುಕೊಳ್ಳಲಿಲ್ಲ. ತಕ್ಷಣ ಕೆಳಗಿಳಿಸಿ, ಕಟ್ಟಿದ್ದ ಧ್ವಜವನ್ನು ಬಿಚ್ಚಿ ಹಾರಿಸಲಾಯಿತು.

ಸಮಯಕ್ಕೆ ಸರಿಯಾಗಿ 9 ಗಂಟೆಗೆ ರಾಷ್ಟ್ರಗೀತೆ ಆರಂಭಗೊಂಡಿತು. ಇದೇ ಸಮಯದಲ್ಲಿ ಧ್ವಜ ಸ್ತಂಭಕ್ಕೆ ಕಟ್ಟಿದ್ದ ರಾಷ್ಟ್ರಧ್ವಜ ಹಾರಿಸಲು ಸಚಿವರು ಹಗ್ಗ ಎಳೆದರು. ಹಗ್ಗ ಬಿಗಿಯಾಗಿ ಕಟ್ಟಿದ್ದರಿಂದ ಧ್ವಜ ತೆರೆದುಕೊಳ್ಳಲಿಲ್ಲ. ತಕ್ಷಣ ಧ್ವಜವನ್ನು ಕೆಳಗಿಳಿಸಿ, ಧ್ವಜವನ್ನು ಬಿಚ್ಚಿ ಹಾರಿಸಿದರು.

ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಐಜಿಪಿ ಅಲೋಕಕುಮಾರ, ನಗರ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟ್ಕರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

  • 1

    Happy
  • 1

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !