ದೂಳುರಹಿತ ಸವಾರಿಗೆ ಬ್ಲೂಸ್ನಾಪ್2

ಶುಕ್ರವಾರ, ಏಪ್ರಿಲ್ 26, 2019
33 °C

ದೂಳುರಹಿತ ಸವಾರಿಗೆ ಬ್ಲೂಸ್ನಾಪ್2

Published:
Updated:
Prajavani

ಅಪ್ಟೆನರ್  ಮೆಕಾಟ್ರಾನಿಕ್ಸ್, ದೂಳುರಹಿತ ತಂಪಾದ ಪ್ರಯಾಣಕ್ಕಾಗಿ ಹೆಲ್ಮೆಟ್‌ಗೆ ಪೂರಕವಾದ ಬ್ಲೂಸ್ನಾಪ್ 2 ಉತ್ಪನ್ನ ಬಿಡುಗಡೆ ಮಾಡಿದೆ.

ಬೆಂಗಳೂರು ಮೂಲದ ಸ್ಟಾರ್ಟಪ್ ವಿಶ್ವದ ಮೊದಲ ವೇರಬಲ್ ಕೂಲರ್ ಅನ್ನು ಪ್ರಸ್ತುತದ ಫುಲ್-ಫೇಸ್ ಹೆಲ್ಮೆಟ್‍ಗಳಿಗೆ 2018ರಲ್ಲಿ ಬಿಡುಗಡೆ ಮಾಡಿತ್ತು. ಹೆಚ್ಚುವರಿ ವಿಶೇಷತೆಗಳೊಂದಿಗೆ ದ್ವಿತೀಯ ತಲೆಮಾರಿಗೆ ಈಗ ಅಪ್‍ಗ್ರೇಡ್ ಮಾಡಿದೆ ಮತ್ತು ಹೊಚ್ಚಹೊಸ ವಿನ್ಯಾಸ ಹೊಂದಿದೆ. 

ಬ್ಲೂಸ್ನಾಪ್ 2 ಪ್ರಸ್ತುತದ ಫುಲ್-ಫೇಸ್ ಹೆಲ್ಮೆಟ್‍ಗೆ ಜೋಡಿಸಬಹುದಾಗಿದ್ದು ಇದು ಹಗುರ ಮತ್ತು ಹಿಂದಿನ ಉತ್ಪನ್ನಕ್ಕಿಂತ ಕಿರಿದಾಗಿದೆ. ಈ ಉತ್ಪನ್ನ ಹೆಲ್ಮೆಟ್‍ಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ವಿಸ್ತರಣೆಗಳನ್ನು ಹೊಂದಿದೆ.

ಬ್ಲೂಸ್ನಾಪ್2 ಶೇ 25ರಷ್ಟು ಗಾಳಿಯ ಹರಿವು ಹೊಂದಿದ್ದು ಅದಕ್ಕೆ ಫ್ಲೋ ಡೈನಮಿಕ್ಸ್ ಮತ್ತು ಹೊಸ ವೆಂಟ್ ಡಿಸೈನ್ ಕಾರಣವಾಗಿದೆ. ದೂಳಿನ ಪ್ರಮಾಣ ಹೆಚ್ಚಾಗಿರುವ ಸ್ಥಳಗಳಲ್ಲಿ ಬ್ಲೂಸ್ನಾಪ್–2 ಅತ್ಯಂತ ಪರಿಣಾಮಕಾರಿಯಾಗಿದೆ. ಹೆಲ್ಮೆಟ್ ತಣ್ಣನೆಯ ಗಾಳಿಯನ್ನು ಹರಿಸುವ ಮೂಲಕ ರೈಡ್‌ಗೆ ದೂಳು ಉಂಟಾಗುವುದನ್ನು ತಡೆಯುತ್ತದೆ. ಅಲ್ಲದೆ ಬ್ಲೂಸ್ನಾಪ್2ರ ನಿವಾರಿಸಬಲ್ಲ ಫಿಲ್ಟರ್ ಟ್ರಾಪ್‍ಗಳು ಉಳಿದ ದೂಳಿನ ಕಣಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ತಣ್ಣನೆಯ ದೂಳುರಹಿತ ರೈಡ್ ದೊರೆಯುತ್ತದೆ.
ಬ್ಲೂಸ್ನಾಪ್2 ಸುಧಾರಿತ ವಾಟರ್ ಮ್ಯಾನೇಜ್‍ಮೆಂಟ್ ಸಿಸ್ಟಂ ಹೊಂದಿದ್ದು ಬಳಕೆದಾರರು 10 ಸೆಕೆಂಡುಗಳ ಕಾಲ ರಿಮೂವಬಲ್ ಫಿಲ್ಟರ್ ಅನ್ನು ನೀರಿನಲ್ಲಿ ಅದ್ದಬೇಕು. ಇಡೀ ವ್ಯವಸ್ಥೆ ರೀಚಾರ್ಜಬಲ್ ಬ್ಯಾಟರಿಯಿಂದ ಶಕ್ತಿ ಹೊಂದಿದ್ದು ಪೂರ್ಣ ಚಾರ್ಜ್ ಮಾಡಿದಾಗ 10 ಗಂಟೆಗಳು ಚಾಲನೆಯಲ್ಲಿರುತ್ತದೆ. 

ಬ್ಲೂಸ್ನಾಪ್ 2 ರೀಟೇಲ್ ದರ ₹ 2299. https://bluarmorhelmets.com ಆನ್‍ಲೈನ್‍ನಲ್ಲಿ ದೊರೆಯುತ್ತದೆ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !