ಸೋಮವಾರ, ನವೆಂಬರ್ 30, 2020
23 °C
ಅನಗತ್ಯ ಗೊಂದಲ ಬೇಡ: ಸಮಿತಿ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್

‘ದಶ ಮಂಟಪ: ನ್ಯಾಯ ಸಮ್ಮತ ತೀರ್ಪು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ದಸರಾ ದಶಮಂಟಪ ತೀರ್ಪಿನಲ್ಲಿ ನ್ಯಾಯಯುತ ತೀರ್ಪು ಬಂದಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂದು ಮಡಿಕೇರಿ ದಸರಾ ಜನೋತ್ಸವ ದಶಮಂಟಪ ಸಮಿತಿ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ಸ್ಪಷ್ಟಪಡಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೀರ್ಪಿನ ವಿಚಾರದಲ್ಲಿ ಬಹುಮಾನ ಸಿಗದ ಕೆಲವರು ಇಲ್ಲ ಸಲ್ಲದ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿಯೂ ಈ ಬಗ್ಗೆ ಸಾಕಷ್ಟು ಟೀಕೆ ಬರುತ್ತಿವೆ. ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಶಮಂಟಪದ ತೀರ್ಪುಗಾರರಾಗಿ ಆಗಮಿಸುವಂತೆ ಸುಮಾರು 30 ಮಂದಿಯ ಬಳಿ ಮನವಿ ಮಾಡಿದ್ದೆವು. ಆದರೆ ಯಾರೊಬ್ಬರೂ ಬರಲು ಒಪ್ಪಿರಲಿಲ್ಲ. ಆ ನಂತರ ಮನವಿಗೆ ಸ್ಪಂದಿಸಿ ತೀರ್ಪುಗಾರರಾಗಿ ಕೊನೆ ಕ್ಷಣದಲ್ಲಿ ಮಡಿಕೇರಿಯ ದಸರೆ ಆಚರಣೆ ಅನುಭವವಿರುವ ರವಿಶಂಕರ್, ಸಂತೋಷ್, ವಿನೋದ್, ಉಲ್ಲಾಸ್ ಆಗಮಿಸಿ ನ್ಯಾಯ ಸಮ್ಮತವಾಗಿ ತೀರ್ಪು ನೀಡಿದ್ದಾರೆ. ಇವರ ಆಯ್ಕೆಯು ಕೂಡ ವಿವಿಧ ದಶಮಂಟಪ ಮುಖಂಡರ ಸಮ್ಮುಖದಲ್ಲೇ ನಡೆದಿತ್ತು ಎಂದು ಹೇಳಿದರು.

ತೀರ್ಪಿನ ಅಂಕವನ್ನು ಲೆಕ್ಕ ಹಾಕುವಾಗ ಎಲ್ಲ ದಶಮಂಟಪಗಳ ಪ್ರಮುಖರು ಹಾಜರಿದ್ದರು. ಸದಸ್ಯರ ಸಮ್ಮುಖದಲ್ಲೇ ಅಂತಿಮ ಅಂಕಪಟ್ಟಿ ಬಹಿರಂಗ ಪಡಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ವೈಯಕ್ತಿವಾಗಿ ನನ್ನ ಹಾಗೂ ತೀರ್ಪುಗಾರರ ವಿರುದ್ಧ ಹೇಳಿಕೆ ನೀಡುವುದು ಕಂಡುಬಂದಲ್ಲಿ ಸೈಬರ್ ಕ್ರೈಂಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಶಮಂಟಪ ಸಮಿತಿ ಕಾರ್ಯದರ್ಶಿ ಎಂ.ಎಲ್ ಸತೀಶ್, ಸದಸ್ಯರಾದ ಮೋಹನ್, ಅಭಿಜಿತ್ ಹಾಜರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.