ಶುಕ್ರವಾರ, ಜೂನ್ 18, 2021
24 °C

ಪ್ರಚೋದನಕಾರಿ ಹೇಳಿಕೆ: ವಾರಿಸ್‌ ಪಠಾಣ್‌ಗೆ ಮತ್ತೊಂದು ನೋಟಿಸ್‌ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದಲ್ಲಿ ಫೆ 15ರಂದು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿಸಿ ಎಐಎಂಐಎಂ ಪಕ್ಷವು ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಪಕ್ಷದ ವಕ್ತಾರ ಹಾಗೂ ಮಾಜಿ ಶಾಸಕ ವಾರಿಸ್‌ ಪಠಾಣ್‌ ವಿಫಲರಾಗಿದ್ದಾರೆ.

ಮಾರ್ಚ್‌ 1ರಂದು ಕಲಬುರ್ಗಿ ಗ್ರಾಮೀಣ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರು ಪಠಾಣ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು. ಠಾಣೆಯ ಪಿಎಸ್‌ಐ ಮುಂಬೈಗೆ ಖುದ್ದು ತೆರಳಿ ನೋಟಿಸ್ ತಲುಪಿಸಿದ್ದರು. ಆದಾಗ್ಯೂ, ಪಠಾಣ್‌ ವಿಚಾರಣೆಗೆ ಬಂದಿಲ್ಲ. ಹೀಗಾಗಿ, ಪೊಲೀಸರು ಮತ್ತೊಂದು ನೋಟಿಸ್‌ ಜಾರಿಗೊಳಿಸಿದ್ದು, ಮಾ 8ರಂದು ಹಾಜರಾಗುವಂತೆ ಪಠಾಣ್‌ ಸೇರಿದಂತೆ 14 ಜನರಿಗೆ ಸೂಚಿಸಿದ್ದೇವೆ. ಅವರೆಲ್ಲರನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದೇವೆ ಎಂದು ಕಲಬುರ್ಗಿ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ತಿಳಿಸಿದ್ದಾರೆ.

ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಪಠಾಣ್‌ ಅವರನ್ನು ಪತ್ತೆಹಚ್ಚಿ ಕರೆತರುವಂತೆ ಸೂಚನೆ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು