ಒಬ್ಬ ಜಾರಕಿಹೊಳಿಯಿಂದ ಸರ್ಕಾರ ಉರುಳಿಸಲು ಸಾಧ್ಯವಿಲ್ಲ: ವೀರಪ್ಪ ಮೊಯಿಲಿ

7

ಒಬ್ಬ ಜಾರಕಿಹೊಳಿಯಿಂದ ಸರ್ಕಾರ ಉರುಳಿಸಲು ಸಾಧ್ಯವಿಲ್ಲ: ವೀರಪ್ಪ ಮೊಯಿಲಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ದಿನ ಬೆಳಗಾದರೆ ಮಾಧ್ಯಮದವರು ಜಾರಕಿಹೊಳಿಯವರ ವಿಚಾರ ಮಾತನಾಡಿ ಅವರಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಅಂತಹದ್ದೇನಿಲ್ಲ. ಒಬ್ಬ ಜಾರಕಿಹೊಳಿ, ಮತ್ತೊಬ್ಬರಾಗಲಿ ಈ ಪಕ್ಷವನ್ನು (ಕಾಂಗ್ರೆಸ್), ಈ ಸರ್ಕಾರ ಉರುಳಿಸಲು ಖಂಡಿತ ಸಾಧ್ಯವಿಲ್ಲ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆರೋಪ ಮಾಡಿದ ಮೇಲೆ ಅದರಲ್ಲಿ ಸತ್ಯಾಂಶ ಇರಲೇ ಬೇಕು. ಏಕೆಂದರೆ ಅವರಿಗೆ ಸ್ಪಷ್ಟ ಮಾಹಿತಿ ಇರುತ್ತದೆ. ಆದರೆ ಇವತ್ತು ಯಡಿಯೂರಪ್ಪ ಅವರು ವಾಮಮಾರ್ಗದಿಂದ ಸರ್ಕಾರ ಉರುಳಿಸಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಅವರು ಹಿಂದೆ ಪಾಪ ಮಾಡಿ ಅವರೇ ಪಕ್ಷದಿಂದ ಹೊರಗೆ ಬಂದರು. ಬಿಜೆಪಿ ಕೂಡ ಅಧಿಕಾರ ಕಳೆದುಕೊಂಡಿತು. ಒಮ್ಮೆ ಕಳೆದುಕೊಂಡ ಅಧಿಕಾರ ಅವರು ಮತ್ತೆ ಕಬಳಿಸಲು ಆಗುವುದಿಲ್ಲ. ಕರ್ನಾಟಕ ಜನ ಸುಸಂಸ್ಕೃತರು. ಯಾವುದೇ ಶಾಸಕರು ಅವರ ಹಣ, ಆಮಿಷಕ್ಕೆ ಒಳಗಾಗಿ ಅವರೊಂದಿಗೆ ಹೋಗುವುದಿಲ್ಲ’ ಎಂದು ತಿಳಿಸಿದರು.

‘ಬಿಜೆಪಿಯವರು ಏನೋ ಒಂದು ಭ್ರಮೆಯಿಂದ ಇಂತಹ ಕೆಲಸ ಮಾಡುತ್ತಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ 18 ಸಂಸದರು ಆಯ್ಕೆಯಾಗಿದ್ದಾರೆ. ಬಹುಶಃ ಅದನ್ನು ಎರಡ್ಮೂರಕ್ಕೆ ಇಳಿಸುವ ಪ್ರಯತ್ನ ಮಾಡಬೇಕಾದರೆ ಅವರು ಸರ್ಕಾರ ಉರುಳಿಸುವ ವಾಮಮಾರ್ಗದ ಕೆಲಸ ಮಾಡಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !