ಶುಕ್ರವಾರ, ಜನವರಿ 22, 2021
28 °C

ಗೋಕಾಕ ಕ್ಷೇತ್ರದಲ್ಲಿ ನಡೆಯುವುದು ತಂತ್ರಗಾರಿಕೆ ರಾಜಕಾರಣ: ಲಖನ್‌ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಗೋಕಾಕ ಕ್ಷೇತ್ರದ ರಾಜಕಾರಣವೇ ಬೇರೆ. ಇದು ಪರೀಕ್ಷೆ ಇದ್ದಂತೆ. 25 ವರ್ಷಗಳಿಂದ ರಮೇಶ ಜೊತೆ ಸೇರಿ ನಾನು ಇಲ್ಲಿ ರಾಜಕಾರಣ ಮಾಡುತ್ತಿದ್ದೆ. ನಮ್ಮ ತಂತ್ರಗಳು ಅವರಿಗೆ ಗೊತ್ತಿವೆ. ಹೀಗಾಗಿ, ಎಲ್ಲವನ್ನೂ ಬಹಿರಂಗ ಹಾಗೂ ರಾಜಾರೋಷವಾಗಿ ಹೇಳಿಕೊಳ್ಳುವುದಿಲ್ಲ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ ತಿಳಿಸಿದರು.

ಗೋಕಾಕದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಲ್ಲಿನದು ತಂತ್ರಗಾರಿಕೆ ರಾಜಕಾರಣ. ಬೇರೆಯವರು ಬಂದು ಇಲ್ಲಿ ರಾಜಕಾರಣ ಮಾಡಲಾಗದು. ಹೊಂದಾಣಿಕೆ ರಾಜಕಾರಣ ಇಲ್ಲಿಲ್ಲ. ಹೇಗೆ ನಡೆಸಬೇಕು ಎನ್ನುವುದು ನನಗೂ, ಸತೀಶ ಜಾರಕಿಹೊಳಿಗೂ ಗೊತ್ತಿದೆ’ ಎಂದರು.

‘ನಮ್ಮಿಂದ ‍ಪ್ರಚೋದನಾಕಾರಿ ಹೇಳಿಕೆ ಕೊಡಿಸಿ ವಿರೋಧಪಕ್ಷದವರು ಅದನ್ನೇ ಬಳಸಿಕೊಳ್ಳುತ್ತಾರೆ. ಹೀಗಾಗಿ, ನಮ್ಮ ಗೇಮ್‌ಪ್ಲಾನ್‌ ಏನು ಎನ್ನುವುದನ್ನು ಹೇಳುವುದಿಲ್ಲ; ಕಣದಲ್ಲೇ ನೋಡಿ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು