ಚಿಕ್ಕಮಗಳೂರು: ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಚಲಾವಣೆಯಾಗಿದ್ದ 7,101 ಅಂಚೆ ಮತಗಳ ಪೈಕಿ 6,437 ಮತಗಳು ಸಿಂಧುವಾಗಿದ್ದು, 648 ತಿರಸ್ಕೃತವಾಗಿವೆ. 16 ಮತಗಳು ನೋಟಾಕ್ಕೆ (ಮೇಲಿನ ಯಾರೂ ಅಲ್ಲ) ಚಲಾವಣೆಯಾಗಿವೆ.

ಕ್ಷೇತ್ರವಾರು ಚಿಕ್ಕಮಗಳೂರಿನಲ್ಲಿ 1,992 ಅಂಚೆ ಮತಗಳು ಚಲಾವಣೆಯಾಗಿವೆ. ಈ ಪೈಕಿ 1,738 ಮತಗಳು ಸಿಂಧುವಾಗಿದ್ದು, 249 ತಿರಸ್ಕೃತವಾಗಿವೆ. ನೋಟಾಕ್ಕೆ ಐದು ಮತಗಳು ಬಿದ್ದಿವೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಟಿ.ರವಿ ಅವರಿಗೆ 1,000, ಕಾಂಗ್ರೆಸ್‌ನ ಬಿ.ಎಲ್.ಶಂಕರ್ ಅವರಿಗೆ 402 ಹಾಗೂ ಜೆಡಿಎಸ್‌ನ ಬಿ.ಎಚ್.ಹರೀಶ್ ಅವರಿಗೆ 329 ಮತಗಳು ಸಂದಿವೆ.

ತರೀಕೆರೆ ಕ್ಷೇತ್ರದಲ್ಲಿ 1,563 ಅಂಚೆ ಮತಗಳು ಚಲಾವಣೆಯಾಗಿವೆ. ಈ ಪೈಕಿ 1,446 ಮತಗಳು ಸಿಂಧುವಾಗಿದ್ದು, 117 ತಿರಸ್ಕೃತಗೊಂಡಿವೆ. ನೋಟಾಕ್ಕೆ ಒಂದೂ ಮತ ಚಲಾವಣೆಯಾಗಿಲ್ಲ. ಬಿಜೆಪಿಯ ಡಿ.ಎಸ್.ಸುರೇಶ್ 606, ಕಾಂಗ್ರೆಸ್‌ನ ಎಸ್.ಎಂ.ನಾಗರಾಜ್ 183, ಜೆಡಿಎಸ್‌ನ ಟಿ.ಎಚ್.ಶಿವಶಂಕರಪ್ಪ 185, ಪಕ್ಷೇತರರಾದ ಜಿ.ಎಚ್.ಶ್ರೀನಿವಾಸ್ 415 ಹಾಗೂ ಎಚ್.ಎಂ.ಗೋಪಿಕೃಷ್ಣ 56 ಮತಗಳನ್ನು ಪಡೆದಿದ್ದಾರೆ.

ಮೂಡಿಗೆರೆ ಕ್ಷೇತ್ರದಲ್ಲಿ 460 ಅಂಚೆಮತಗಳು ಚಲಾವಣೆಯಾಗಿವೆ. ಈ ಪೈಕಿ 404 ಸಿಂಧುವಾಗಿದ್ದು, 51 ತಿರಸ್ಕೃತಗೊಂಡಿವೆ. ನೋಟಾಕ್ಕೆ ಐದು ಮತಗಳು ಚಲಾವಣೆಯಾಗಿವೆ. ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ 184, ಕಾಂಗ್ರೆಸ್‌ನ ಮೋಟಮ್ಮ 136, ಜೆಡಿಎಸ್‌ನ ಬಿ.ಬಿ.ನಿಂಗಯ್ಯ 82 ಮತಗಳನ್ನು ಪಡೆದಿದ್ದಾರೆ.

ಕಡೂರು ಕ್ಷೇತ್ರದಲ್ಲಿ 2120 ಅಂಚೆ ಮತಗಳು ಚಲಾವಣೆಯಾಗಿವೆ. ಈ ಪೈಕಿ 1,961 ಮತಗಳು ಸಿಂಧುವಾಗಿದ್ದು, 156 ತಿರಸ್ಕೃತಗೊಂಡಿವೆ. ನೋಟಾಕ್ಕೆ ಮೂರು ಮತಗಳು ಚಲಾವಣೆಯಾಗಿವೆ. ಬಿಜೆಪಿಯ ಬೆಳ್ಳಿ ಪ್ರಕಾಶ್ 968, ಜೆಡಿಎಸ್‌ನ ವೈಎಸ್‌ವಿ ದತ್ತ 588 ಹಾಗೂ ಕಾಂಗ್ರೆಸ್‌ನ ಕೆ.ಎಸ್.ಆನಂದ್ 403 ಮತಗಳನ್ನು ಪಡೆದಿದ್ದಾರೆ.

ಶೃಂಗೇರಿ ಕ್ಷೇತ್ರದಲ್ಲಿ 966 ಅಂಚೆ ಮತಗಳು ಚಲಾವಣೆಯಾಗಿವೆ. ಈ ಪೈಕಿ 888 ಮತಗಳು ಸಿಂಧುವಾಗಿದ್ದು, 75 ತಿರಸ್ಕೃತಗೊಂಡಿವೆ. ನೋಟಾಕ್ಕೆ ಮೂರು ಮತಗಳು ಚಲಾವಣೆಯಾಗಿವೆ. ಬಿಜೆಪಿಯ ಡಿ.ಎನ್.ಜೀವರಾಜ್ 405, ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ 377 ಹಾಗೂ ಜೆಡಿಎಸ್‌ನ ಎಚ್.ಜಿ.ವೆಂಕಟೇಶ್ 102 ಮತಗಳನ್ನು ಪಡೆದಿದ್ದಾರೆ.

ತರೀಕೆರೆ ಕ್ಷೇತ್ರದಲ್ಲಿ ಪಕ್ಷೇತರ ಇಬ್ಬರು ಅಭ್ಯರ್ಥಿಗಳು (ಜಿ.ಎಚ್.ಶ್ರೀನಿವಾಸ್, ಎಚ್.ಎಂ.ಗೋಪಿ) ಹೊರತುಪಡಿಸಿದರೆ ಜಿಲ್ಲೆಯ ಬೇರಾವುದೇ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳು ಒಂದಂಕಿಗಿಂತ ಜಾಸ್ತಿ ಅಂಚೆ ಮತ ಪಡೆದಿಲ್ಲ. ಬಹುತೇಕರು ಒಂದೂ ಮತ ಪಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.