ಭಾನುವಾರ, ಆಗಸ್ಟ್ 25, 2019
23 °C

ಅಗ್ನಿಶಾಮಕ ಇಲಾಖೆಯ ನಾಲ್ವರಿಗೆ ರಾಷ್ಟ್ರಪತಿ ಪದಕ

Published:
Updated:

ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಾಲ್ವರಿಗೆ 2019ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

ಮಂಗಳೂರು ವಲಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಟಿ.ಎನ್‌. ಶಿವಶಂಕರ್ ಹಾಗೂ ಬನ್ನೇರುಘಟ್ಟ ರಸ್ತೆಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯ ಕಮಾಂಡೆಂಟ್ ಆಗಿರುವ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎನ್. ಮಂಜುನಾಥ ಅವರು ವಿಶಿಷ್ಟ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.

ಶ್ಲಾಘನೀಯ ಸೇವೆಗಾಗಿ ನಾಗರಬಾವಿ ಅಗ್ನಿಶಾಮಕ ಠಾಣೆ ಅಧಿಕಾರಿ ಆರ್‌.ಟಿ.ನಂಜೇಗೌಡ ಹಾಗೂ ಅಂಕೋಲಾದ ಅಗ್ನಿಶಾಮಕ ವಾಹನ ಚಾಲಕ ತಿಪ್ಪಣ್ಣ ನಾಯ್ಕ ಅವರಿಗೆ ಪದಕ ಸಿಕ್ಕಿದೆ. 

Post Comments (+)