ಬುಧವಾರ, ಜನವರಿ 22, 2020
19 °C

ಪೌರತ್ವ ಕಾಯ್ದೆ ಬೆಂಬಲಿಸಿ ರಾಮನಗರದಲ್ಲಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಪೌರತ್ವ ತಿದ್ದುಪಡಿ‌ ಕಾಯ್ದೆ ಬೆಂಬಲಿಸಿ ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಜಾಥಾ ನಡೆಯಿತು.

ಇಲ್ಲಿನ ಕೆಂಪೇಗೌಡ ವೃತ್ತದಲ್ಲಿ   ಚಾಲನೆ ನೀಡಲಾಯಿತು. ಅಲ್ಲಿಂದ ಮೆರವಣಿಗೆಯು ಬಸ್ ನಿಲ್ದಾಣ, ಎಂ.ಜಿ. ರಸ್ತೆ ಮೂಲಕ ಜ್ಯೂನಿಯರ್ ಕಾಲೇಜು ಮೈದಾನದವರೆಗೆ ಸಾಗಿತು.

ಮೆರವಣಿಗೆ ಉದ್ದಕ್ಕೂ ಜನರು ರಾಷ್ಟ್ರ ಧ್ವಜ, ಓಂ ಲಾಂಛನವುಳ್ಳ‌ ಧ್ವಜಗಳನ್ನು ಹಿಡಿದು ಸಾಗಿದರು.  ನಾಲ್ಕು ತಾಲ್ಲೂಕುಗಳ ಬಿಜೆಪಿ ಕಾರ್ಯಕರ್ತರು, ಆರ್ ಎಸ್ ಎಸ್, ಎಬಿವಿಪಿ, ಹಿಂದೂ‌ ಜಾಗರಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು