ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ– ಹುಬ್ಬಳ್ಳಿ ನಡುವೆ ಹೈಸ್ಪೀಡ್‌ ರೈಲು: ಅಂಗಡಿ

Last Updated 27 ಜುಲೈ 2019, 18:25 IST
ಅಕ್ಷರ ಗಾತ್ರ

ಬೆಳಗಾವಿ:‘ಬೆಳಗಾವಿ– ಧಾರವಾಡ– ಹುಬ್ಬಳ್ಳಿ ನಗರಗಳ ನಡುವೆ ಬುಲೆಟ್‌ ರೈಲು ಮಾದರಿಯ ಹೈಸ್ಪೀಡ್‌ ರೈಲು ಓಡಿಸುವ ಚಿಂತನೆ ಇದ್ದು, ಈ ಸಂಬಂಧ ಅಧ್ಯಯನ ನಡೆಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಶನಿವಾರ ಇಲ್ಲಿ ಹೇಳಿದರು.

‘ಈ ಮೂರೂ ನಗರಗಳಿಗೆ ಬಸ್ಸಿನ ಹಾಗೆ ರೈಲು ಸಂಪರ್ಕ ಕಲ್ಪಿಸಿದರೆ ಹೆಚ್ಚಿನ ಅನುಕೂಲ ಆಗುತ್ತದೆ. ಹೀಗಾಗಿ ಈ ಯೋಜನೆಯನ್ನು ಯಾವ ರೀತಿ ಅನುಷ್ಠಾನ ಮಾಡಬೇಕು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುವುದು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬೆಳಗಾವಿ– ಧಾರವಾಡದ ನಡುವೆ ನೇರವಾದ ರೈಲು ಮಾರ್ಗ ಇಲ್ಲ. ಖಾನಾಪುರ– ಲೋಂಡಾ– ಅಳ್ನಾವರ ಮಾರ್ಗವಾಗಿ ಸದ್ಯ ರೈಲುಗಳುಸಂಚರಿಸುತ್ತಿದ್ದು, ಇದೇ ಮಾರ್ಗದಲ್ಲಿ ಹೈಸ್ಪೀಡ್‌ ರೈಲು ಓಡಿಸುತ್ತಾರೆಯೇ? ಅಥವಾ ಧಾರವಾಡ–ಕಿತ್ತೂರು ಮೂಲಕ ಹಾದು
ಹೋಗುವ ಹಾಗೆ ಹೊಸ ಮಾರ್ಗ ನಿರ್ಮಿಸುತ್ತಾರೆಯೇ ಎಂಬುದರ ಬಗ್ಗೆ ಸಚಿವರು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT