ಶುಕ್ರವಾರ, ಅಕ್ಟೋಬರ್ 18, 2019
23 °C

ಪಿಯು ಉಪನ್ಯಾಸಕರ ನೇಮಕ ಪ್ರಕ್ರಿಯೆ; ಅಧಿಕಾರಿಗಳಿಂದ ಮಾಹಿತಿ ಕೇಳಿದ ಸಚಿವ

Published:
Updated:

ಬೆಂಗಳೂರು: ಪಿಯು ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಕೀ ಉತ್ತರದಲ್ಲಿ ತಪ್ಪುಗಳು ಉಳಿದಿರುವ ಕುರಿತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಕ್ಯಾಪ್ಟನ್ ರಾಜೇಂದ್ರ ಅವರಿಂದ ಮಾಹಿತಿ ಪಡೆದರು.

ಪ್ರಜಾವಾಣಿಯಲ್ಲಿ ಪ್ರಕಟವಾಗಿರುವಂತೆ ನಾಲ್ಕು ವಿಷಯಗಳ ಕೀ ಉತ್ತರದಲ್ಲಿ ತಪ್ಪುಗಳಿರುವ ಸಂಶಯ ಬಂದಿರುವುದು ನಿಜ. ಆದರೆ ಉತ್ತರದಲ್ಲೇ ಗೊಂದಲ ಇರುವುದರಿಂದ ಈ ಗೊಂದಲ ಉಂಟಾಗಿದೆ. ಪರಿಣಿತರಿಂದ ಮಾಹಿತಿ ಪಡೆದುಕೊಂಡು ಅವರ ಸಲಹೆಯಂತೆ ಕೊನೆಯ ಕೀ ಉತ್ತರ ಪಡೆಯಲಾಗಿದೆ ಎಂದು ರಾಜೇಂದ್ರ ಅವರು ವಿವರಿಸಿದರು.

ಇದನ್ನೂ ಓದಿ: ಕೀ ಉತ್ತರದಲ್ಲೇ ತಪ್ಪು; ಉಳಿದ ಬಿಕ್ಕಟ್ಟು

ಸಾರ್ವಜನಿಕ ಬದುಕಲ್ಲಿ ಇಂತಹ ಯಾವ ಅನುಮಾನಗಳಿಗೂ ಅವಕಾಶ ಇರಬಾರದು ಎಂದು ಸಚಿವರು ಸೂಚಿಸಿದರು.

ಚುನಾವಣಾ ಆಯೋಗ ಅನುಮತಿ ನೀಡಿದರೆ ತಕ್ಷಣ ಆಯ್ಕೆ ಪಟ್ಟಿ ಬಿಡುಗಡೆ ಮಾಡುವುದಾಗಿ ರಾಜೇಂದ್ರ ತಿಳಿಸಿದರು.

Post Comments (+)