ಶುಕ್ರವಾರ, ನವೆಂಬರ್ 22, 2019
22 °C

ನೀಟ್‌ಗೆ ಮೊದಲು ಪಿಯು ಫಲಿತಾಂಶ ಇಲ್ಲ?

Published:
Updated:

ಬೆಂಗಳೂರು: ಈ ವರ್ಷ ‘ನೀಟ್‌’ ಮತ್ತು ಸಿಇಟಿ ಪರೀಕ್ಷೆ ನಡೆಯುವುದಕ್ಕೆ ಮೊದಲಾಗಿ ಪಿಯು ಫಲಿತಾಂಶ ಪ್ರಕಟಿಸದಿರಲು ಸರ್ಕಾರ ನಿರ್ಧರಿಸುವ ನಿರೀಕ್ಷೆ ಇದೆ.

ಶನಿವಾರ ಇಲ್ಲಿ ನಡೆದ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರ ‘ಸಂವೇದನಾ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪವಾಯಿತು.

‘ಸಾಮಾನ್ಯವಾಗಿ ಪಿಯುಸಿ ಫಲಿತಾಂಶ ಪ್ರಕಟವಾದ ನಾಲ್ಕು ದಿನಗಳ ಬಳಿಕ ನೀಟ್‌ ನಡೆಸಲಾಗುತ್ತದೆ. ಪಿಯುಸಿಯಲ್ಲಿ ನಿರೀಕ್ಷಿತ ಅಂಕ ಬರದಿದ್ದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಹಾಗಾಗಿ ನೀಟ್ ಪರೀಕ್ಷೆ ಬಳಿಕ ಪಿಯುಸಿ ಫಲಿತಾಂಶ ಪ್ರಕಟಿಸಿ’ ಎಂದು ಮಧುಗಿರಿಯ ನಾಗರಾಜ್ ಮನವಿ ಮಾಡಿದರು. ಇದರ ಬಗ್ಗೆ ಪರಿಶೀಲಿಸಿ ನಿರ್ಧರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ನೀಟ್‌ಗೆ ಮೊದಲಾಗಿ ಪಿಯು ಫಲಿತಾಂಶ ಬಂದರೆ ವಿದ್ಯಾರ್ಥಿಗಳ ಮೇಲೆ ಒತ್ತಡ ಉಂಟಾಗುವ ಅಪಾಯ ಇದ್ದೇ ಇದೆ, ಇದರ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು.

ಪ್ರತಿಕ್ರಿಯಿಸಿ (+)