ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗ ವೋಟ್‌ ಮಾಡಿ, ಮಧ್ಯಾಹ್ನ ಮಳೆ ಬರಬಹುದು!

Last Updated 18 ಏಪ್ರಿಲ್ 2019, 7:01 IST
ಅಕ್ಷರ ಗಾತ್ರ

ಬೆಂಗಳೂರು: ಮತದಾನಕ್ಕಾಗಿ ಸಂಜೆಯವರೆಗೂ ಕಾಯಬೇಡಿ, ಯಾಕೆಂದರೆ ಮಧ್ಯಾಹ್ನ ಮಳೆ ಬರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ದಕ್ಷಿಣಒಳನಾಡು ಸೇರಿದಂತೆ ಮಲೆನಾಡು ಭಾಗದಲ್ಲಿ ಮಧ್ಯಾಹ್ನದ ವೇಳೆ ಭಾರೀ ಮಳೆಯಾಗಲಿದ್ದು ಮತದಾನಕ್ಕೆ ಆಡಚಣೆಯಾಗುವ ಸಾಧ್ಯತೆಗಳಿವೆ ಎಂದುಹವಾಮಾನ ಇಲಾಖೆ ಹೇಳಿದೆ.

ಈಗಷ್ಟೆ ಬಂದವರದಿಯ ಪ್ರಕಾರ ಗುರುವಾರ ಮಧ್ಯಾಹ್ನದಿಂದ ರಾತ್ರಿ 10 ಗಂಟೆಯವರೆಗೂ ಗುಡುಗು ಸಹಿತ ಮಳೆ ಬೀಳಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಕೋಲಾರ, ಬೆಂಗಳೂರುಗ್ರಾಮಾಂತರ ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಮಲೆನಾಡು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಒಳನಾಡಿನಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಮಧ್ಯಾಹ್ನಅಥವಾ ಸಂಜೆಗೆ ಗುಡುಗು ಸಹಿತ ಮಳೆ ಬೀಳುವುದರಿಂದಇಂದು ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ.

‘ಮಧ್ಯೆ ಮಹಾರಾಷ್ಟ್ರದಿಂದ ಕನ್ಯಾಕುಮಾರಿಯವರೆಗೆ ಟ್ರಫ್‌ (ಮೋಡಗಳ ಸಾಲು) ಚಾಚಿಕೊಂಡಿದೆ. ಅದು ರಾಜ್ಯದಲ್ಲೂ ಹಾದು ಹೋಗಿದ್ದು, ದಕ್ಷಿಣದಲ್ಲಿ ಬಲವಾದ ಗಾಳಿ ಮತ್ತು ತಾಪಮಾನ ಏರಿಕೆಯ ಪರಿಣಾಮಮುಂದಿನ ಎರಡು ಮೂರು ದಿನ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಹವಾಮಾನ ವರದಿಯ ಕ್ಷಣ ಕ್ಷಣದ ಮಾಹಿತಿಯನ್ನು ‘ಸಿಡಿಲು‘ ಮೊಬೈಲ್‌ ಆ್ಯಪ್‌ ಮೂಲಕವೂ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT