ರಕ್ಷಿತ್‌–ರಶ್ಮಿಕಾ ಲವ್ ಬ್ರೇಕಪ್‌: ಕಿಚ್ಚ ಸುದೀಪ್ ಕಿಡಿಕಾರಿದ್ದು ಯಾರ ವಿರುದ್ಧ?

7

ರಕ್ಷಿತ್‌–ರಶ್ಮಿಕಾ ಲವ್ ಬ್ರೇಕಪ್‌: ಕಿಚ್ಚ ಸುದೀಪ್ ಕಿಡಿಕಾರಿದ್ದು ಯಾರ ವಿರುದ್ಧ?

Published:
Updated:

ಬೆಂಗಳೂರು: ಚಂದನವನದ ಕ್ಯೂಟ್ ಜೋಡಿ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಲವ್‌ ಬ್ರೇಕಪ್‌ ವದಂತಿಗಳಿಗೆ ಸಂಬಂಧಿಸಿದಂತೆ ನಟ ರಕ್ಷಿತ್‌ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿರುವ ಬೆನ್ನಲೇ ಕಿಚ್ಚ ಸುದೀಪ್‌ ಇದೀಗ ರಕ್ಷಿತ್ ಶೆಟ್ಟಿಗೆ ನೈತಿಕ ಬೆಂಬಲ ನೀಡಿದ್ದಾರೆ. 

ಲವ್‌ ಬ್ರೇಕಪ್‌ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳು ಶೀಘ್ರದಲ್ಲೇ ಬಗೆಹರಿಯಲಿದ್ದು, ವದಂತಿಗಳತ್ತ ಗಮನಕೊಡಬಾರದು ಎಂದು ರಕ್ಷಿತ್ ಶೆಟ್ಟಿ ಮನವಿ ಮಾಡಿದ್ದರು. ರಕ್ಷಿತ್ ಬರೆದ ಫೇಸ್‌ಬುಕ್‌ ಬರಹಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ: ರಕ್ಷಿತ್‌ ಶೆಟ್ಟಿ ಸ್ಪಷ್ಟನೆ ನೀಡಿದ ಫೇಸ್‌ಬುಕ್‌ ಬರಹ

ರಕ್ಷಿತ್ ಬರಹವನ್ನು ಮೆಚ್ಚಿಕೊಂಡಿರುವ ನಟ ಕಿಚ್ಚ ಸುದೀಪ್‌  'ಇದುವೇ ಘನತೆ ಹಾಗೂ ಪರಿಪಕ್ವತೆ ರಕ್ಷಿತ್, ನೀನು ಚೆನ್ನಾಗಿರು' ಎಂದು ಹೇಳುವ ಮೂಲಕ ರಕ್ಷಿತ್‌ ಶೆಟ್ಟಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಅವರು ಭಾವನೆಗಳನ್ನೂ ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆ? ಪ್ರತಿಯೊಬ್ಬರಿಗೂ ಅವರದ್ದೇ ಆದ ಖಾಸಗಿತನ ಇದೆ, ಅದಕ್ಕೆ ಧಕ್ಕೆ ತರುವುದು ಸ್ವಲ್ಪ ಅತಿಯಾಯಿತು ಎನಿಸಲ್ವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುವವರ ವಿರುದ್ಧ ಕಿಚ್ಚ ಸುದ್ದಿ ಕಿಡಿಕಾರಿದ್ದಾರೆ. 

ಬರಹ ಇಷ್ಟವಾಯಿತೆ?

 • 28

  Happy
 • 3

  Amused
 • 2

  Sad
 • 3

  Frustrated
 • 6

  Angry

Comments:

0 comments

Write the first review for this !