ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿ ಉಳಿದ 53 ಅಭ್ಯರ್ಥಿಗಳು

ಕೊನೆ ದಿನ ನಾಮಪತ್ರ ವಾಪಸ್‌ ಪಡೆದ 19 ಮಂದಿ
Last Updated 28 ಏಪ್ರಿಲ್ 2018, 10:35 IST
ಅಕ್ಷರ ಗಾತ್ರ

ಹಾಸನ: ಮೇ 12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 53 ಅಭ್ಯರ್ಥಿಗಳು ಉಳಿದಿದ್ದಾರೆ.

ಜಿಲ್ಲೆಯ 7 ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿ ಊರ್ಜಿತಗೊಂಡಿದ್ದ 72 ಉಮೇದುವಾರರ ಪೈಕಿ 19 ಮಂದಿ ಶುಕ್ರವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 86 ಮಂದಿ 129 ನಾಮಪತ್ರಗಳನ್ನು ಸಲ್ಲಿಸಿದ್ದರು. ಅದರಲ್ಲಿ 14 ನಾಮಪತ್ರ ತಿರಸ್ಕೃತಗೊಂಡಿದ್ದು, 72 ಮಂದಿಯ ನಾಮಪತ್ರ ಸ್ವೀಕೃತವಾಗಿತ್ತು.

ನಾಮಪತ್ರಗಳನ್ನು ಹಿಂಪಡೆದವರ ವಿವರ:
ಶ್ರವಣಬೆಳಗೊಳ ಕ್ಷೇತ್ರದಿಂದ ಯಾರು ನಾಮಪತ್ರ ವಾಪಸ್‌ ಪಡೆದಿಲ್ಲ. ಅರಸೀಕೆರೆಯಿಂದ ವೈ.ಬಿ.ಪ್ರಭುದೇವ, ರವಿನಾಯ್ಕ, ಬಿ.ಎಸ್‌.ಅಶೋಕ್‌, ಬಿ.ಎನ್‌.ವೆಂಕಟೇಶ್‌, ಬಿ.ಸಿ.ರವಿ, ಕೆ.ಎನ್‌.ಕುಮಾರ್‌, ಮಂಜುಳ. ಹೊಳೆನರಸೀಪುರ ಕ್ಷೇತ್ರದಿಂದ ಎಚ್‌.ಬಿ.ಯೋಗೇಶ್‌, ನಿಂಗೇಗೌಡ, ಜಿ.ಕೆ.ಗುರು.ಸಕಲೇಶಪುರ ಕ್ಷೇತ್ರದಿಂದ ಚಂದ್ರು, ಎಂ.ಕೆ.ದೇವಪ್ಪ ಮಲ್ಲಿಗೆವಾಳು, ಎಸ್‌.ಮಂಜುನಾಥ್‌, ಎಚ್‌.ಆರ್‌.ನಾರಾಯಣ. ಡಾ.ಎಚ್‌.ಆರ್‌.ನಾರಾಯಣಸ್ವಾಮಿ, ಜಿ.ಕೃಷ್ಣಪ್ಪ.
ಬೇಲೂರು ಕ್ಷೇತ್ರದಿಂದ ಎಚ್‌.ಟಿ.ವೆಂಕಟಯ್ಯ, ಪರ್ವತೇಗೌಡ ಹಾಗೂ ಅರಕಲಗೂಡು ಕ್ಷೇತ್ರದಿಂದ ವಿಶ್ವನಾಥ್‌ ನಾಮಪತ್ರ ವಾಪಸ್‌ ಪಡೆದಿದ್ದಾರೆ.

ಸ್ವೀಕೃತ ನಾಮಪತ್ರಗಳ ವಿವರ: ಶ್ರವಣಬೆಳಗೊಳ-5, ಅರಸೀಕೆರೆ-13, ಬೇಲೂರು-9, ಹಾಸನ-13, ಹೊಳೆನರಸೀಪುರ-11, ಅರಕಲಗೂಡು-8, ಸಕಲೇಶಪುರ-13. ಒಟ್ಟು 72.

ಕಣದಲ್ಲಿರುವ ಅಭ್ಯರ್ಥಿಗಳು: ಶ್ರವಣಬೆಳಗೊಳ-5, ಅರಸೀಕೆರೆ-6, ಬೇಲೂರು-7, ಹಾಸನ-13, ಹೊಳೆನರಸೀಪುರ-8, ಅರಕಲಗೂಡು-7, ಸಕಲೇಶಪುರ-7. 

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 32 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಅಧಿಕಾರಿ ಹಾಗೂ ನೌಕರರ ವಿರುದ್ಧ ಒಟ್ಟು 41 ದೂರು ದಾಖಲಾಗಿದ್ದು, ಇದರಲ್ಲಿ ಎರಡು ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸಿ.ಜಾಫರ್‌ ತಿಳಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮೀಣ ಪ್ರದೇಶದಲ್ಲಿ 1300 ಹಾಗೂ ನಗರ ಪ್ರದೇಶದಲ್ಲಿ 1400 ಮತದಾರರು ಮೀರಿದ್ದರೆ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ 12 ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು 1978 ಮತಗಟ್ಟೆ ಸ್ಥಾಪಿಸಲಾಗಿದೆ.

ನಕ್ಸಲ್‌ ಹಾಗೂ ಕಾಡಾನೆ ದಾಳಿ ಇರುವ 12 ಮತ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಅಬಕಾರಿ ಇಲಾಖೆ ಈವರೆಗೆ ಜಿಲ್ಲೆಯಲ್ಲಿ 596 ದಾಳಿ ನಡೆಸಿ, ಅಕ್ರಮ ಮದ್ಯ ಮಾರಾಟ, ದಾಸ್ತಾನು, ಸಾಗಾಣಿಕೆ ಸಂಬಂಧಿಸಿದಂತೆ 174 ಪ್ರಕರಣ ದಾಖಲಿಸಿ, 101 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ₹ 3,33,99,467 ಮೌಲ್ಯದ ಮದ್ಯ ಹಾಗೂ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಗೆ 11,890 ಸಿಬ್ಬಂದಿ ಅವಶ್ಯಕತೆ ಇದ್ದು, ಮೊದಲ ಹಂತದಲ್ಲಿ 2378 ಪಿಆರ್‌ಒ, ಎಪಿಆರ್ಒ ಮತ್ತು 7134 ಪಿಒಗಳಿಗೆ ತರಬೇತಿ ನೀಡಲಾಗಿದೆ. ಎರಡನೇ ಹಂತದ ತರಬೇತಿ ಮೇ 7 ರಂದು ನೀಡಲಾಗುವುದು ಎಂದು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರ್‌ವಾಡ್‌ ಮಾತನಾಡಿ, ಕೆಲ ದಿನಗಳ ಹಿಂದೆ ಟಾಟಾ ಸುಮೊ ವಾಹನದಲ್ಲಿ ₹ 79 ಲಕ್ಷ ನಗದು ಸಾಗಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ಮ್ಯಾನೇಜರ್ ಸೂಕ್ತ ದಾಖಲೆ ಹಾಜರು ಪಡಿಸಿದ್ದರಿಂದ ಬಿಡುಗಡೆ ಮಾಡಲಾಯಿತು. ಒಂದು ಕೋಟಿಗೂ ಹೆಚ್ಚು ಪತ್ತೆಯಾದರೆ ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಲಾಗುತ್ತದೆ. ಅವರಿಗೆ ದಾಖಲೆ ತೋರಿಸಿ ಬಿಡಿಸಿಕೊಳ್ಳಬಹುದು ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ 35 ಚೆಕ್‌ಪೋಸ್ಟ್‌ ಹಾಗೂ 54 ಫ್ಲೈಯಿಂಗ್‌ ಸ್ಕ್ವಾಡ್‌ ನೇಮಿಸಲಾಗಿದೆ. ಅಕ್ರಮ ಚಟುವಟಿಕೆ ಕಂಡು ಬಂದರೆ ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಬಹುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT