ಸೋಮವಾರ, ನವೆಂಬರ್ 18, 2019
25 °C

ಮೀಸಲಾತಿ ಪ್ರಮಾಣ ಹೆಚ್ಚಳ: ಆಯೋಗ ರಚನೆ

Published:
Updated:

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಸರ್ಕಾರಿ, ಸಾರ್ವಜನಿಕ ಉದ್ಯಮಗಳಲ್ಲಿ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ವರದಿ ನೀಡಲು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿದೆ.

ಈ ವಿಷಯದಲ್ಲಿ ಆಸಕ್ತಿ ಇರುವ ಸಾರ್ವಜನಿಕರು, ಸಂಬಂಧಿಸಿದ ಸಮುದಾಯಗಳು, ಸಂಘ, ಸಂಸ್ಥೆಗಳು, ವಿದ್ವಾಂಸರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಯಾರಾದರೂ ಆಯೋಗಕ್ಕೆ ಮನವಿ, ಅಹವಾಲು ಸಲ್ಲಿಸಿಬಹುದು. ಡಿ.10 ಕೊನೆಯ ದಿನ. ಮನವಿ ಕಳುಹಿಸಬೇಕಾದ ವಿಳಾಸ- ‘ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಆಯೋಗ’, ಕಲ್ಯಾಣ ಕೇಂದ್ರ, ಯವನಿಕ ಆವರಣ, ಸಮಾಜ ಕಲ್ಯಾಣ ಇಲಾಖೆ, ನೃಪತುಂಗಾ ರಸ್ತೆ, ಬೆಂಗಳೂರು–1.

ಪ್ರತಿಕ್ರಿಯಿಸಿ (+)