ರೋಹಿದಾಸ, ಶರಣ ಹರಳಯ್ಯ ಜಯಂತಿ ನಾಳೆ

7
ಮೆರವಣಿಗೆಗೆ ಸಿದ್ಧತೆ; ಸಮಾಜದವರು ಭಾಗಿ

ರೋಹಿದಾಸ, ಶರಣ ಹರಳಯ್ಯ ಜಯಂತಿ ನಾಳೆ

Published:
Updated:

ಬೆಳಗಾವಿ: ನಗರದಲ್ಲಿ ಫೆ.15ರಂದು ಪ್ರಥಮ ಅಂತರರಾಷ್ಟ್ರೀಯ ಸಂತ ರೋಹಿದಾಸ ಹಾಗೂ ಶಿವಶರಣ ಹರಳಯ್ಯ ಜಯಂತ್ಯುತ್ಸವ ನಡೆಯಲಿದೆ.

ರಾಜ್ಯ ಶರಣ ಹರಳಯ್ಯ ಹಾಗೂ ಸಂತ ರವಿದಾಸ (ಚಮ್ಮಾರ) ಮಹಾಸಭಾಮತ್ತು ಬೆಳಗಾವಿಯ ಸಂತ ರೋಹಿದಾಸ ಹರಳಯ್ಯ ಚರ್ಮಕಾರ–ಸಮಗಾರ ಸಮಾಜ ಸುಧಾರಣಾ ಮಹಾಮಂಡಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚಿನ ಮಂದಿ ಭಾಗವಹಿಸಲಿದ್ದಾರೆ ಎಂದು ಸಮಾಜದ ಮುಖಂಡ ಅನಿಲ ಸೌದಾಗರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾಗುವ ಶೋಭಾಯಾತ್ರೆ, ಶಹಾಪುರದ ನಾಥ ಪೈ ವೃತ್ತದವರೆಗೂ ನಡೆಯಲಿದೆ. ಮಧ್ಯಾಹ್ನ ಶರಣರ ಭಾವಚಿತ್ರಗಳಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ವೇದಿಕೆ ಕಾರ್ಯಕ್ರಮವು, ಶಹಾಪುರದ ಸಂತ ರೋಹಿದಾಸ ಸಾಂಸ್ಕೃತಿಕ ಭವನದಲ್ಲಿ ಸಂಜೆ ನಡೆಯಲಿದ್ದು, ಸಮಾಜದ ಹಿರಿಯ ಸಾಧಕರನ್ನು ಸತ್ಕರಿಸಲಾಗುವುದು. ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಚಿತ್ರದುರ್ಗ ಜಿಲ್ಲೆಯ ಐಮಂಗಲ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !