ಗುರುವಾರ , ಸೆಪ್ಟೆಂಬರ್ 19, 2019
21 °C
’ನಾಯಕ ಬೇರೆ ಮುಖ್ಯಮಂತ್ರಿ ಬೇರೆ, ಸಿದ್ದರಾಮಯ್ಯ ನಮ್ಮ ನಯಕರೂ ಹೌದು’

ಮುಂದಿನ ಚುನಾವಣೆ ‌ನಂತರ ಹೊಸ ಮುಖ್ಯಮಂತ್ರಿ ಪ್ರಶ್ನೆ: ಸತೀಶ ಜಾರಕಿಹೊಳಿ

Published:
Updated:

ಹುಬ್ಬಳ್ಳಿ: ಹೊಸ ಮುಖ್ಯಮಂತ್ರಿ ‌ಪ್ರಶ್ನೆ ಏನಿದ್ದರೂ ಮುಂದಿನ ಚುನಾವಣೆಯ ನಂತರ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂಬ ಕಾಂಗ್ರೆಸ್‌ನ ಕೆಲ ಶಾಸಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನಮ್ಮ ನಾಯಕರೂ ಹೌದು. ನಾಯಕರು ಬೇರೆ ಮುಖ್ಯಮಂತ್ರಿ ಬೇರೆ. ಮುಖ್ಯಮಂತ್ರಿ ಪ್ರಶ್ನೆ ಈಗ ಉದ್ಭವಿಸದು. ಕಾಂಗ್ರೆಸ್ ಹೈಕಮಾಂಡ್ ಸಹಕಾರದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.

ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Post Comments (+)