ವಿರಳ ‘ಪಿಪಿ’ ರಕ್ತದ ಮಾದರಿ ಪತ್ತೆ

7
ಮಣಿಪಾಲದ ಕೆಎಂಸಿ ಆಸ್ಪತ್ರೆ ವೈದ್ಯರ ಸಾಧನೆ

ವಿರಳ ‘ಪಿಪಿ’ ರಕ್ತದ ಮಾದರಿ ಪತ್ತೆ

Published:
Updated:

ಉಡುಪಿ: ವಿರಳ ಹಾಗೂ ದೇಶದಲ್ಲಿ ಮೊದಲು ಎನ್ನಲಾದ ‘ಪಿಪಿ ಅಥವಾ ಪಿ ನಲ್‌’ ರಕ್ತದ ಗುಂಪಿನ ಮಾದರಿಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರು ಪತ್ತೆ ಹಚ್ಚಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಡಿಪಾರ್ಟ್‌ಮೆಂಟ್ ಆಫ್ ಇಮ್ಯುನೊ ಹೆಮಾಟಾಲಜಿ ಹಾಗೂ ರಕ್ತ ವರ್ಗಾವಣೆ ವಿಭಾಗದ ಮುಖ್ಯಸ್ಥರಾದ ಡಾ.ಶಾಮಿ ಶಾಸ್ತ್ರಿ ಅವರ ನೇತೃತ್ವದ ವೈದ್ಯರ ತಂಡ ಈ ಸಾಧನೆ ಮಾಡಿದೆ. ಈಚೆಗೆ ಕಸ್ತೂರ ಬಾ ಆಸ್ಪತ್ರೆಯ ರಕ್ತನಿಧಿ ವಿಭಾಗಕ್ಕೆ ರೋಗಿಯೊಬ್ಬರಿಗೆ ತುರ್ತು ರಕ್ತದ ಅಗತ್ಯವಿರುವ ಬಗ್ಗೆ ಬೇಡಿಕೆ ಬಂದಿತ್ತು. ಈ ಮಾದರಿಯ ರಕ್ತವು ನಿಧಿಯಲ್ಲಿ ಲಭ್ಯವಿರಲಿಲ್ಲ. ಇತರ 80 ಘಟಕಗಳಲ್ಲಿ ತಪಾಸಣೆ ನಡೆಸಿದಾಗಲೂ ನಿರ್ದಿಷ್ಟ ರಕ್ತದ ಮಾದರಿ ಯಾವ ರಕ್ತದೊಂದಿಗೂ ಹೊಂದಾಣಿಕೆಯಾಗಲಿಲ್ಲ.

ಬಳಿಕ ರಕ್ತದ ಮಾದರಿಯನ್ನು ಸೆರಾಲಜಿಕಲ್‌ ಪರೀಕ್ಷೆಗಾಗಿ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿರುವ ಅಂತರರಾಷ್ಟ್ರೀಯ ರಕ್ತನಿಧಿ ರೆಫರೆನ್ಸ್‌ ಲ್ಯಾಬೊರೇಟರಿಗೆ ಕಳುಹಿಸಲಾಯಿತು. ಈ ವೇಳೆ ರೋಗಿಯ ರಕ್ತದಲ್ಲಿ ವಿರಳವಾದ ‘ಪಿ ಪಿ’ ಪೆನೊಟೈಪ್‌ ಕಣಗಳು ಇರುವುದು ಪತ್ತೆಯಾಯಿತು ಎಂದು ಕೆಎಂಸಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.‌

ದೇಶದಲ್ಲಿ ಮೊದಲ ಬಾರಿಗೆ ‘ಪಿ ಪಿ’ ಮಾದರಿಯ ರಕ್ತದ ಗುಂಪು ಪತ್ತೆಯಾಗಿದೆ ಎಂದು ಮಾಹೆ ಸಹ ಕುಲಪತಿ ಡಾ.ಪೂರ್ಣಿಮಾ ಬಾಳಿಗ ಹರ್ಷ ವ್ಯಕ್ತಪಡಿಸಿದ್ದಾರೆ. ರೋಗಿಯ ‘ಪಿ’ ನಲ್ ಮಾದರಿಯ ರಕ್ತದಲ್ಲಿ ಪಿಪಿ1ಪಿಕೆ ಎಂಬ ರೋಗನಿರೋಧಕ ಅಂಶವೂ ಪತ್ತೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !